ಭಾರತದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಬ್ರಿಟನ್ನ ನಂಬರ್ ವನ್ ಸಾಫ್ಟ್ವೇರ್ ಹಾಗೂ ಐಟಿ ಸರ್ವೀಸ್ ಕಂಪನಿ ಎನಿಸಿಕೊಂಡಿದೆ. ಬ್ರಿಟನ್ ಮಾರುಕಟ್ಟೆಗೆ ಸಾಫ್ಟ್ವೇರ್ ಮತ್ತು ಐಟಿ ಸೇವೆಗಳನ್ನು ಒದಗಿಸ್ತಾ ಇರೋ ಟಾಪ್ 30 ಪೂರೈಕೆದಾರರಲ್ಲಿ, ಟಿಸಿಎಸ್ ಅಗ್ರಸ್ಥಾನದಲ್ಲಿದೆ.
200ಕ್ಕೂ ಹೆಚ್ಚು ಕಂಪನಿಗಳ ಆದಾಯದ ವಿವರವನ್ನು ವಿಶ್ಲೇಷಣೆಯ ಮೂಲಕ ಸಂಗ್ರಹಿಸಲಾಗಿದೆ. ಈ ಸಮೀಕ್ಷೆಯಲ್ಲಿ TCS ಬ್ರಿಟನ್ನ ಅತಿದೊಡ್ಡ SITS ಪೂರೈಕೆದಾರನಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.ಈ ಬಗ್ಗೆ ಖುದ್ದು ಟಿಸಿಎಸ್ ಮಾಹಿತಿಯನ್ನು ನೀಡಿದೆ. ಕಂಪನಿಯು ಉಪ-ವರ್ಗದ ಮೂಲಕ ಆದಾಯದ ಶ್ರೇಯಾಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಅಪ್ಲಿಕೇಶನ್ಗಳ ಕಾರ್ಯಾಚರಣೆಗೆ ಸಂಬಂಧಪಟ್ಟ ಚಾರ್ಟ್ನಲ್ಲಿ ಅಗ್ರಸ್ಥಾನದಲ್ಲಿದೆ.
IT/BP ಸೇವೆಗಳಲ್ಲಿ ಎರಡನೇ ಶ್ರೇಯಾಂಕವನ್ನು ಪಡೆದಿದೆ, ಸಲಹಾ ಮತ್ತು ಪರಿಹಾರಗಳ ವಿಭಾಗಗಳಲ್ಲಿ ಮೂರನೇ ಸ್ಥಾನದಲ್ಲಿದೆ.ಕೊರೊನಾ ಸಾಂಕ್ರಾಮಿಕದ ಬಳಿಕ TCS, ಬ್ರಿಟನ್ನಲ್ಲಿ ಸಾಕಷ್ಟು ಚುರುಕಾಗಿ ಕಾರ್ಯನಿರ್ವಹಿಸ್ತಾ ಇದೆ. ಈ ಪುಟಿದೇಳುವಿಕೆಯೇ ನಂಬರ್ ವನ್ ಸ್ಥಾನ ಕಾಪಾಡಿಕೊಳ್ಳಲು ಸಹಾಯ ಮಾಡಿದೆ. ರಾಯಲ್ ಲಂಡನ್, ವರ್ಜಿನ್ ಅಟ್ಲಾಂಟಿಕ್, ಪಿಂಚಣಿ ಇಲಾಖೆ ಮತ್ತು ಲಂಡನ್ಗೆ ಸಾರಿಗೆಗೆ ಸಂಬಂಧಪಟ್ಟ ಮಹತ್ವದ ಒಪ್ಪಂದಗಳನ್ನು ಟಿಸಿಎಸ್ ಬಾಚಿಕೊಂಡಿದೆ.
ಯುಕೆ ಕಾರ್ಪೊರೇಶನ್ಗಳೊಂದಿಗೆ ಕೈಜೋಡಿಸಿರುವ ಟಿಸಿಎಸ್, ತಂತ್ರಜ್ಞಾನವನ್ನು ಮತ್ತಷ್ಟು ಆಧುನೀಕರಿಸುವತ್ತ ಹೆಜ್ಜೆ ಇಟ್ಟಿದೆ. ಅನೇಕ ಹೊಸ ಪಾಲುದಾರಿಕೆಗಳನ್ನು ಪ್ರಾರಂಭಿಸಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಕ್ಲೈಂಟ್ಗಳೊಂದಿಗೆ ನಾವೀನ್ಯತೆ, ಬೆಳವಣಿಗೆ ಮತ್ತು ರೂಪಾಂತರವನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಈ ಸಂಸ್ಥೆ. ಇದೇ ಕಾರಣಕ್ಕೆ ಬ್ರಿಟನ್ನಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ.