ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಮಹತ್ವವಾದ ಆದೇಶವೊಂದನ್ನು ನೀಡಿದೆ. ಅಕೌಂಟ್ ಫ್ರೋಜನ್ ಎಂಬ ಕಾರಣ ಕೊಟ್ಟು ಚೆಕ್ ಹಿಂದಿರುಗಿಸಿದ್ರೂ, ಗ್ರಾಹಕರ ಖಾತೆಯ ಅಸ್ತಿತ್ವವನ್ನು ಬ್ಯಾಂಕ್ ತಿರಸ್ಕರಿಸುವಂತಿಲ್ಲ ಅಂತಾ ಹೇಳಿದೆ.
ಈ ಸಂಬಂಧ ರಾಜಸ್ತಾನ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ ರದ್ದು ಮಾಡಿದೆ. ಮೇಲ್ಮನವಿದಾರಿಗೆ ಬ್ಯಾಂಕ್ನಿಂದ್ಲೇ ಚೆಕ್ ನೀಡಲಾಗಿದ್ದರೂ, ವ್ಯವಸ್ಥಾಪಕರು ತಮ್ಮ ಬ್ಯಾಂಕ್ನಲ್ಲಿ ಅಂತಹ ಯಾವುದೇ ಖಾತೆಯನ್ನು ತೆರೆದಿಲ್ಲ ಮತ್ತು ನಿರ್ವಹಿಸುತ್ತಿಲ್ಲ ಎಂದು ನಿರ್ದಿಷ್ಟವಾಗಿ ತಳ್ಳಿಹಾಕಿದ್ದಾರೆ.
ಪ್ರತಿವಾದಿಯು ಮೇಲ್ಮನವಿದಾರರ ಪರವಾಗಿ ಡ್ರಾ ಮಾಡಿದ ಚೆಕ್ ಗೆ ಸಂಬಂಧಪಟ್ಟಂತೆ ‘ಖಾತೆಯನ್ನು ಫ್ರೀಜ್ ಮಾಡಲಾಗಿದೆ’ ಎಂಬ ಕಾರಣ ಕೊಟ್ಟು ಅದನ್ನು ಹಿಂದಿರುಗಿಸಿರುವುದು ಆಶ್ಚರ್ಯಕರವಾಗಿದೆ ಅಂತಾ ನ್ಯಾಯಾಲಯ ಹೇಳಿದೆ.
ಅಕೌಂಟ್ ಫ್ರೀಜ್ ಆಗಿದೆ ಎಂದರೆ ಖಾತೆ ಅಸ್ತಿತ್ವದಲ್ಲಿತ್ತು ಎಂದರ್ಥ ಅಂತಾ ಅಭಿಪ್ರಾಯಪಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿವರವಾದ ವಿಚಾರಣೆಯ ಅಗತ್ಯವಿದೆ ಎಂದು ಹೇಳಿದೆ. ಸೆಕ್ಷನ್ 138ರ ಅಡಿಯಲ್ಲಿನ ವಿಚಾರಣೆಯನ್ನು ರಾಜಸ್ತಾನ ಹೈಕೋರ್ಟ್ ರದ್ದು ಮಾಡಿದ್ದು ಸರಿಯಲ್ಲವೆಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಂಡು ಇನ್ನು 6 ತಿಂಗಳೊಳಗಾಗಿ ಸಮಂಜಸ ತೀರ್ಮಾನಕ್ಕೆ ಬರುವಂತೆ ರಾಜಸ್ತಾನ ಹೈಕೋರ್ಟ್ ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.