ಬ್ಯಾಂಕ್ ಖಾತೆ ಹೊಂದಿರುವ ಗ್ರಾಹಕರಿಗೆ ದೊಡ್ಡ ಸುದ್ದಿಯೊಂದಿದೆ. ಈ ತಿಂಗಳ ಕೊನೆಯಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸವಿದ್ದರೆ ಅದನ್ನು ಮೊದಲೇ ಮುಗಿಸಿಕೊಳ್ಳಿ. ಯಾಕಂದ್ರೆ ಜನವರಿ 28 ರಿಂದ ಜನವರಿ 31 ರವರೆಗೆ ಬ್ಯಾಂಕಿಂಗ್ ವಹಿವಾಟಿಗೆ ತೊಂದರೆಯಾಗಬಹದು. ಬ್ಯಾಂಕ್ ಯೂನಿಯನ್ 2 ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಿದ್ದು, ವಹಿವಾಟಿಗೆ ತೊಡಕುಂಟಾಗಲಿದೆ. ಜನವರಿ 28, ತಿಂಗಳ ನಾಲ್ಕನೇ ಶನಿವಾರ, ಈ ಕಾರಣದಿಂದಾಗಿ ಬ್ಯಾಂಕುಗಳು ಮುಚ್ಚಿರುತ್ತವೆ.
ಭಾನುವಾರದ ಕಾರಣ ಜನವರಿ 29 ರಂದು ದೇಶಾದ್ಯಂತ ಬ್ಯಾಂಕುಗಳಿಗೆ ರಜಾ ಇರುತ್ತದೆ. ಬ್ಯಾಂಕ್ ಯೂನಿಯನ್ ಜನವರಿ 30 ಮತ್ತು 31 ರಂದು ಮುಷ್ಕರವನ್ನು ಘೋಷಿಸಿದೆ. ಹಾಗಾಗಿ ಗ್ರಾಹಕರು 4 ದಿನಗಳ ಕಾಲ ತೊಂದರೆ ಅನುಭವಿಸಬೇಕಾಗುತ್ತದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್‌ಬಿಯು) ಸಭೆ ಮುಂಬೈನಲ್ಲಿ ನಡೆದಿದ್ದು, ಎರಡು ದಿನಗಳ ಕಾಲ ಮುಷ್ಕರ ನಡೆಸಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿವೆ.
ವಾರದಲ್ಲಿ 5 ದಿನಗಳ ಕಾಲ ಬ್ಯಾಂಕಿಂಗ್ ಕೆಲಸ ಮಾಡಬೇಕು ಎಂಬುದು ಬ್ಯಾಂಕ್ ಒಕ್ಕೂಟಗಳ ಬೇಡಿಕೆ. ಇದರೊಂದಿಗೆ ಪಿಂಚಣಿ ನವೀಕರಣದ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ಎನ್ ಪಿಎಸ್ ರದ್ದುಪಡಿಸಿ ವೇತನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದಾರೆ. ಎಲ್ಲ ಕೇಡರ್‌ಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂಬ ಒತ್ತಾಯವೂ ಕೇಳಿ ಬಂದಿದೆ.