ಪಠ್ಯ ಪುಸ್ತಕ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ತಮ್ಮ ಲೇಖನಗಳನ್ನು ಪಠ್ಯದಿಂದ ಹಿಂಪಡೆಯುವಂತೆ ಏಳು ಲೇಖಕರು ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇವುಗಳನ್ನು ಹಿಂಪಡೆದಿತ್ತು.
ಇದೀಗ ಸಾರ್ವಜನಿಕರು, ಪೋಷಕರು ಹಾಗೂ ಗಣ್ಯರು ಇವುಗಳನ್ನು ಮತ್ತೆ ಮುಂದುವರಿಸುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅಕ್ಟೋಬರ್ 28ರಂದು ಆದೇಶ ಹೊರಡಿಸಿರುವ ಸರ್ಕಾರ, ಏಳು ಪಠ್ಯಗಳನ್ನು 2022 – 23ನೇ ಶೈಕ್ಷಣಿಕ ಸಾಲಿಗೆ ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸುವಂತೆ ಆದೇಶ ಹೊರಡಿಸಿದೆ.
ಹೀಗಾಗಿ 6, 9 ಹಾಗೂ 10ನೇ ತರಗತಿಯ ಪಠ್ಯಗಳಲ್ಲಿದ್ದ ಸಾಹಿತಿ ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಡಾ. ಜಿ ರಾಮಕೃಷ್ಣ ಅವರ ಭಗತ್ ಸಿಂಗ್, ರೂಪ ಹಾಸನ ಅವರ ಅಮ್ಮನಾಗುವುದೆಂದರೆ, ಈರಪ್ಪ ಎಂ ಕಂಬಳಿ ಅವರ ಹೀಗೊಂದು ಟಾಪ್ ಪ್ರಯಾಣ, ಸತೀಶ ಕುಲಕರ್ಣಿ ಅವರ ಕಟ್ಟುತ್ತೇವ ನಾವು, ಸುಕನ್ಯ ಮಾರುತಿ ಅವರ ಏಣಿ ಹಾಗೂ ದೊಡ್ಡಹುಲ್ಲೂರು ರುಕ್ಕೋಜಿ ರಾವ್ ಅವರ ಡಾ. ರಾಜಕುಮಾರ್ ಪಠ್ಯಗಳು ಮೊದಲಿನಂತೆ ಈ ಸಾಲಿನಲ್ಲಿ ಮುಂದುವರೆಯಲಿವೆ.