ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿರುಸಿನ ಮತದಾನ ನಡೆದಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಬೆಳಿಗ್ಗೆ 11 ಗಂಟೆಯವರೆಗೆ ರಾಜ್ಯದಲ್ಲಿ ಶೇ.20.99ರಷ್ಟು ಮತದಾನವಾಗಿದೆ. ಬೆಂಗಳೂರು ಕೇಂದ್ರದಲ್ಲಿ ಶೇ.19.30ರಷ್ಟು ಮತದಾನ, ಬೆಂಗಳೂರು ಉತ್ತರದಲ್ಲಿ ಶೇ.17.50ರಷ್ಟು ಮತದಾನ, ಬೆಂಗಳೂರು ದಕ್ಷಿಣದಲ್ಲಿ ಶೇ.17ರಷ್ಟು, ಬೆಂಗಳೂರು ನಗರ ಶೇ.17.72ರಷ್ಟು ಮತದಾನ, ಬೆಂಗಳೂರು ಗ್ರಾಮಾಂತರ ಶೇ.20.23ರಷ್ಟು ಮತದಾನವಾಗಿದೆ.
ಬಳ್ಳಾರಿಯಲ್ಲಿ ಶೇ.23.56ರಷ್ಟು ಮತದಾನ, ಬೀದರ್ ಶೇ.20.54ರಷ್ಟು ಮತದಾನ, ಬೆಳಗಾವಿ ಜಿಲ್ಲೆಯಲ್ಲಿ ಶೇ.20.76ರಷ್ಟು ಮತದಾನವಾಗಿದೆ. ಕೊಡಗು ಶೇ.26.49ರಷ್ಟು ಮತದಾನ, ಕೊಪ್ಪಳದಲ್ಲಿ ಶೇ.21.46ರಷ್ಟು ಮತದಾನ, ರಾಯಚೂರಿನಲ್ಲಿ ಶೇ.22.48ರಷ್ಟು ಮತದಾನ, ವಿಜಯಪುರದಲ್ಲಿ ಶೇ.20.66ರಷ್ಟು ಮತದಾನವಾಗಿದೆ.