ಬೆಳಗಾವಿ: ಇಂದಿನಿಂದ 10 ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಬೆಳಿಗ್ಗೆ 11ಗಂಟೆಗೆ ಅಧಿವೇಶನದಲ್ಲಿ ಮಹನಿಯರ ಭಾವಚಿತ್ರಗಳ ಅನಾವರಣದ ಮೂಲಕ ಕಲಾಪಕ್ಕೆ ಚಾಲನೆ ದೊರೆಯಲಿದೆ.
ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ಮಹಾಮೇಳಾವ್ ಸಮಾವೇಶ ನಡೆಸುತ್ತಿದ್ದು, ಆದರೆ ಮಹಾಮೇಳಾವ್ ಗೆ ಅನುಮತಿ ನೀಡಿಲ್ಲ ಎಂದು ಬೆಳಗಾವಿ ಡಿಸಿಪಿ ತಿಳಿಸಿದ್ದಾರೆ. ಆದಾಗ್ಯೂ ಸಮಾವೇಶಕ್ಕೆ ಸಿದ್ಧತೆ ನಡೆಸಿಕೊಳ್ಳಲಾಗಿದ್ದು, ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ವ್ಯಾಕ್ಸಿನ್ ಡಿಪೋ ಅರ್ಧ ಕೀ.ಮೀ ಸುತ್ತ 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ. ವ್ಯಾಕ್ಸಿನ್ ಡೊಪೋ ಸುತ್ತಮುತ್ತ ಗುಂಪು ಸೇರದಂತೆ, ಗುಂಪು ಸೇರಿ ಓಡಾಡಿದ್ರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಬೈಕ್ ನಲ್ಲಿ ಅನೌನ್ಸ್ ಮಾಡಿದ್ದಾರೆ.