alex Certify BIG NEWS: ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಮೇಲೆ ಬೀಳಲಿದೆ ಮತ್ತೊಂದು ಹೊರೆ; ತೈಲ ದರ ಹೆಚ್ಚಳದ ಎಚ್ಚರಿಕೆ ನೀಡಿದ ರಷ್ಯಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಮೇಲೆ ಬೀಳಲಿದೆ ಮತ್ತೊಂದು ಹೊರೆ; ತೈಲ ದರ ಹೆಚ್ಚಳದ ಎಚ್ಚರಿಕೆ ನೀಡಿದ ರಷ್ಯಾ..!

ಉಕ್ರೇನ್​ನ ಮೇಲೆ ರಷ್ಯಾದ ಆಕ್ರಮಣದ ಬಳಿಕ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾದ ತೈಲ ಆಮದುಗಳ ಮೇಲೆ ನಿಷೇಧವನ್ನು ಹೇರಿರುವುದು ದುರಂತ ಪರಿಣಾಮಗಳನ್ನುಂಟು ಮಾಡುತ್ತದೆ ಎಂದು ರಷ್ಯಾದ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್​​ ನೋವಾಕ್​ ಎಚ್ಚರಿಕೆ ನೀಡಿದ್ದಾರೆ.

ರಷ್ಯಾದ ತೈಲಗಳ ಮೇಲಿನ ನಿಷೇಧವು ಜಾಗತಿಕ ಮಾರುಕಟ್ಟೆಗೆ ದುರಂತದ ಪರಿಣಾಮಕ್ಕೆ ಕಾರಣವಾಗುತ್ತದೆ. ಅನಿರೀಕ್ಷಿತ ಬೆಲೆ ಏರಿಕೆ ಉಂಟಾಗುತ್ತದೆ. ಪ್ರತಿ ಬ್ಯಾರಲ್​ಗೆ 300 ಡಾಲರ್​ ಅಥವಾ ಅದಕ್ಕಿಂತಲೂ ಹೆಚ್ಚಾಗುತ್ತದೆ ಎಂದು ರಷ್ಯಾದ ಉಪ ಪ್ರಧಾನಿ ಅಲೆಕ್ಸಾಂಡರ್​ ವಾರ್ನಿಂಗ್​​ ನೀಡಿದ್ದಾರೆ.

ಯುರೋಪಿಯನ್​ ಮಾರುಕಟ್ಟೆಯಲ್ಲಿ ರಷ್ಯಾದ ತೈಲವನ್ನು ತ್ವರಿತವಾಗಿ ಬದಲಾಯಿಸುವುದು ಅಸಾಧ್ಯವೆಂದು ನೋವಾಕ್​ ಹೇಳಿದ್ದಾರೆ.

ಇದು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗೂ ಇದು ಯುರೋಪಿಯನ್ ಗ್ರಾಹಕರ ಪಾಲಿಗೆ ದುಬಾರಿಯೆನಿಸಲಿದೆ ಎಂದು ಹೇಳಿದರು.‌

ರಷ್ಯಾದ ತೈಲದ ದರದ ಮೇಲಿನ ನಿರ್ಬಂಧದ ಮಾತುಕತೆಗಳು ಅಸ್ಥಿರತೆಯನ್ನು ಸೃಷ್ಟಿಸುತ್ತದೆ ಹಾಗೂ ಗ್ರಾಹಕರಿಗೆ ಇದು ಹಾನಿಯನ್ನು ಉಂಟು ಮಾಡಬಹುದು ಎಂದು ನೋವಾಕ್​ ಅಂದಾಜಿಸಿದ್ದಾರೆ.

ನಾರ್ಡ್ ಸ್ಟ್ರೀಮ್ 2 ಪೈಪ್‌ಲೈನ್ ಯೋಜನೆಯ ಸ್ಥಗಿತಕ್ಕೆ ಪ್ರತೀಕಾರವಾಗಿ, ರಷ್ಯಾವು ನಾರ್ಡ್ ಸ್ಟ್ರೀಮ್ 1 ಪೈಪ್‌ಲೈನ್ ಮೂಲಕ ಸರಬರಾಜುಗಳನ್ನು ನಿಲ್ಲಿಸಬಹುದು .ಇಲ್ಲಿಯವರೆಗೆ ನಾವು ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಇದರಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ನೊವಾಕ್ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...