ವಾಹನ ಚಾಲನೆ ಮಾಡುವಾಗ ಸುರಕ್ಷತೆ ಮತ್ತು ಸಾವಧಾನ ಅತಿ ಮುಖ್ಯ. ಅತಿ ವೇಗದ ಚಾಲನೆಯಿಂದ ಅವಘಡಗಳಾಗುವುದೇ ಜಾಸ್ತಿ. ಈ ರೀತಿ ಅತಿ ವೇಗದ ಚಾಲನೆಯಿಂದ ಕರ್ನಾಟಕದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಬೆಚ್ಚಿ ಬೀಳಿಸುವಂತಿದೆ.
ಹೌದು, ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಈ ಕುರಿತಂತೆ ವರದಿ ಒಂದನ್ನು ಬಿಡುಗಡೆ ಮಾಡಿದ್ದು, ಕಳೆದ ವರ್ಷ ಅತಿ ವೇಗದ ಚಾಲನೆಯಿಂದ ತಮಿಳುನಾಡಿನ ಬಳಿಕ ಕರ್ನಾಟಕದಲ್ಲಿಯೇ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ತಮಿಳುನಾಡಿನಲ್ಲಿ 11,419 ಮಂದಿ ಸಾವನ್ನಪ್ಪಿದ್ದರೆ ಕರ್ನಾಟಕದಲ್ಲಿ 8,797 ಮಂದಿ ಸಾವಿಗೀಡಾಗಿದ್ದಾರೆ.
ಕಳೆದ ವರ್ಷ ದೇಶದಲ್ಲಿ ಒಟ್ಟು 4,03,116 ರಸ್ತೆ ಅಪಘಾತಗಳು ಸಂಭವಿಸಿದ್ದು ಈ ಪೈಕಿ 2,40,828 ಪ್ರಕರಣಗಳು ಅತಿ ವೇಗದ ಚಾಲನೆಯಿಂದ ಸಂಭವಿಸಿದೆ. ಕಳೆದ ವರ್ಷ ಕರ್ನಾಟಕದಲ್ಲಿ ಒಟ್ಟು 34,647 ಅಪಘಾತ ಪ್ರಕರಣಗಳು ಸಂಭವಿಸಿದ್ದು,10,038 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ವೇಗದ ಚಾಲನೆಯಿಂದಲೇ 8,797 ಮಂದಿ ಸಾವನ್ನಪ್ಪಿದ್ದಾರೆ.