ಬೆಂಗಳೂರು: ಬೆಂಗಳೂರು ವಿವಿ ಉಪಕುಲಪತಿ ಪ್ರೊ.ವೇಣುಗೋಪಾಲ್ ಅಕ್ರಮವಾಗಿ 28 ಕೋಟಿ ರೂ. ಮೊತ್ತದ ಬಿಲ್ ಗೆ ಅನುಮೋದನೆ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ವಿವಿ ಸಿಬ್ಬಂದಿಗಳು ಹಾಗೂ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳ ವಿರುದ್ಧವೇ ದೂರು ದಾಖಲಿಸಿತ್ತು.
ಇದೀಗ ದೂರು ವಾಪಸ್ ಪಡೆಯುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಒಕ್ಕೂಟ ನಾಳೆ ವಿಶ್ವವಿದ್ಯಾಲಯ ಬಂದ್ ಗೆ ಕರೆ ನೀಡಿದ್ದು, ತರಗತಿಗಳನ್ನು ಬಹಿಷ್ಕರಿಸಿವೆ.
ಬೆಳಿಗ್ಗೆ 10 ಗಂಟೆಗೆ ವಿವಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ತಿಳಿಸಿದೆ.
ವಿವಿ ಪ್ರಭಾರ ವಿತ್ತಾಧಿಕಾರಿ ಆ.ಜಯಲಕ್ಷ್ಮಿ ವಿದ್ಯಾರ್ಥಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ.