ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನಗಲಿದ್ರು ಅವರ ನಗು, ಅವರ ಒಳ್ಳೆಯತನ ಅವರು ಕನ್ನಡ ಸಿನಿ ಲೋಕಕ್ಕೆ ನೀಡಿರುವ ಕೊಡುಗೆ ಎಂದೆಂದಿಗೂ ಜೀವಂತ. ಪುನೀತ್ ಕಾಲವಾದ ಮೇಲೆ ಪ್ರತಿ ಜಿಲ್ಲೆಯಲ್ಲೂ, ಪ್ರತಿ ತಾಲೂಕಿನಲ್ಲೂ ಒಂದು ರಸ್ತೆಗಾದರೂ ಅವರ ಹೆಸರನ್ನಿಟ್ಟು ಮರುನಾಮಕರಣ ಮಾಡಲಾಗ್ತಿದೆ.
ಪುನೀತ್ ಅವರ ಬೆಂಗಳೂರಿನ ಅಭಿಮಾನಿಗಳು ಸಹ ಇದೇ ಬಯಕೆ ವ್ಯಕ್ತಪಡಿಸಿದ್ದರು. ಬೆಂಗಳೂರಿನ ಪ್ರತಿಷ್ಟಿತ ರಸ್ತೆಯೊಂದಕ್ಕೆ ಪುನೀತ್ ಹೆಸರನ್ನ ಮರುನಾಮಕರಣ ಮಾಡಲು ಮನವಿ ಮಾಡಿದ್ದರು. ಈ ಕಾರ್ಯಕ್ಕೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಎನ್ ಆರ್ ರಮೇಶ್ ಕೂಡ ಸಾಥ್ ನೀಡಿದರು.
ಈ ಸಂಬಂಧ ಎನ್.ಆರ್. ರಮೇಶ್ ಹಾಗೂ ಅಪ್ಪು ಅಭಿಮಾನಿಗಳು ಬಿಬಿಎಂಪಿಗೆ ಲಿಖಿತ ಮನವಿ ಸಹ ಸಲ್ಲಿಸಿದ್ರು. ಇದೀಗ ಇವರ ಮನವಿಯನ್ನು ಒಪ್ಪಿಕೊಂಡಿರುವ ಪಾಲಿಕೆ ಅಪ್ಪು ಹೆಸರಿಡಲು ಗ್ರೀನ್ ಸಿಗ್ನಲ್ ನೀಡಿದೆ.
ಗಡಿಗಳಿಲ್ಲದ ಭಾರತದ ನಕ್ಷೆಯಲ್ಲಿ ನಗರಗಳನ್ನು ಗುರುತಿಸಿದ ವಿದ್ಯಾರ್ಥಿ…..!
ಬೆಂಗಳೂರಿನ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆ ವೆಗಾಸಿಟಿ ಮಾಲ್ ಜಂಕ್ಷನ್ ವರೆಗೂ ಪುನೀತ್ ರಾಜ್‍ಕುಮಾರ್ ಹೆಸರಿಡಲು ತೀರ್ಮಾನಿಸಲಾಗಿದೆ.
ಎರಡು ಲೋಕಸಭೆ, ಆರು ವಿಧಾನಸಭಾ ಕ್ಷೇತ್ರ ಹಾದುಹೋಗುವ 12 ಕಿಮೀ ಉದ್ದದ ರಸ್ತೆಗೆ ಅಪ್ಪು ಹೆಸರಿಡಲು ಪಾಲಿಕೆ ಹಸಿರು ನಿಶಾನೆ ನೀಡಿದೆ. ಯಾವಾಗ ಮರುನಾಮಕರಣ ನಡೆಯಲಿದೆ ಎಂಬ ಬಗ್ಗೆ ಇನ್ನು ಬಹಿರಂಗವಾಗಿಲ್ಲವಾದರೂ, ಕೆಲವು ದಿನಗಳಲ್ಲೇ ದಿನಾಂಕ ಅಂತಿಮವಾಗಲಿದ್ದು, ಮುಖ್ಯಮಂತ್ರಿಯವರೇ ಈ ಬಗ್ಗೆ ಘೋಷಿಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.