ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಎರಡನೇ ಹಂತದ ಪಾದಯಾತ್ರೆ ಬೆಂಗಳೂರು ನಗರಕ್ಕೆ ಕಾಲಿಟ್ಟಿದೆ. ಬೆಂಗಳೂರಿನ ಜನತೆ ಹಾಗೂ ರೈತರಿಗಾಗಿ ನಾವು ಹೋರಾಟ ನಡೆಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಮ್ಮ ಪಾದಯಾತ್ರೆ ಬೆಂಗಳೂರು ನಗರಕ್ಕೆ ಎಂಟ್ರಿಕೊಟ್ಟಿದೆ. ಬೆಂಗಳೂರಿನಲ್ಲಿ ಇನ್ನೂ 3 ದಿನ ಟ್ರಾಫಿಕ್ ಜಾಮ್ ಆಗಬಹುದು. ಹೀಗಾಗಿ ಬೆಂಗಳೂರು ಜನತೆಯ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ರಷ್ಯಾ – ಉಕ್ರೇನ್ ವಾರ್: ವ್ಲಾಡಿಮಿರ್ ಪುಟಿನ್ ಗೆ ಮತ್ತೊಂದು ಶಾಕ್, ಗೌರವಾರ್ಥ ನೀಡಿದ್ದ ಬ್ಲಾಕ್ ಬೆಲ್ಟ್ ಹಿಂಪಡೆದ ವಿಶ್ವ ಟೇಕ್ವಾಂಡೋ
ಪಾದಯಾತ್ರೆಗೆ ಪಕ್ಷ ಬೇಧ ಮರೆತು ಸಹಕಾರ ಕೊಟ್ಟಿದ್ದಾರೆ. ಟೀಕೆಗಳನ್ನು ಉಪದೇಶವೆಂದು ಸಂತೋಷದಿಂದ ಸ್ವೀಕಾರ ಮಾಡುತ್ತೇವೆ. ಪಾದಯಾತ್ರೆ ಇಂದು ಕೆಂಗೇರಿಯಿಂದ ಆರಂಭವಾಗಲಿದೆ ಎಂದರು.
ಬಿಬಿಎಂಪಿ ಕಮಿಷ್ನರ್ ನಮ್ಮ ಬ್ಯಾನರ್ ಗಳನ್ನು ತೆಗೆಸ್ತಿದ್ದಾರೆ. ಆದರೆ ಬಿ ಎಸ್ ವೈ ಜನ್ಮದಿನದ ಬ್ಯಾನರ್ ಹಾಗೇ ಇದೆ. ನಮ್ಮ ವಿರುದ್ಧ ದುರುದ್ದೇಶದಿಂದ ಬಿಜೆಪಿಯವರು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.