alex Certify BIG NEWS: ಬೆಂಗಳೂರಿನಲ್ಲೇ ನಡೆಯಲಿದೆ 14 ನೇ ಆವೃತ್ತಿಯ ʼಏರೋ ಇಂಡಿಯಾʼ ಶೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರಿನಲ್ಲೇ ನಡೆಯಲಿದೆ 14 ನೇ ಆವೃತ್ತಿಯ ʼಏರೋ ಇಂಡಿಯಾʼ ಶೋ

14 ನೇ ಆವೃತ್ತಿಯ ಮೆಗಾ ಅಂತರರಾಷ್ಟ್ರೀಯ ಏರ್ ಶೋ ‌ʼಏರೋ ಇಂಡಿಯಾ 2023ʼ ಈ ಬಾರಿಯೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುವುದು ಖಚಿತವಾಗಿದೆ. ಆದರೆ ದಿನಾಂಕವನ್ನು ಮಾತ್ರ ಇನ್ನೂ ನಿಗದಿಪಡಿಸಿಲ್ಲವೆಂದು ಹೇಳಲಾಗಿದೆ.

ಏರೋ ಇಂಡಿಯಾ 2023  ವೆಬ್‌ ಸೈಟ್‌ ಅನ್ನು ಈಗ ಲೈವ್‌ ಮಾಡಲಾಗಿದ್ದು, ಬೆಂಗಳೂರಿನ ಯಲಹಂಕದಲ್ಲಿರುವ ವಾಯುನೆಲೆಯಲ್ಲಿ ಏರ್‌ ಶೋ ನಡೆಯಲಿದೆ ಎಂದು ಇದರಲ್ಲಿ ತಿಳಿಸಲಾಗಿದೆ.

ಏಷ್ಯಾದ ಅತಿದೊಡ್ಡ ಮಿಲಿಟರಿ ವಾಯುಯಾನ ಪ್ರದರ್ಶನ ಏರೋ ಇಂಡಿಯಾ ಬೆಂಗಳೂರಿನಲ್ಲಿ ನಡೆಯುತ್ತಿರುವುದು ರಾಜ್ಯದ ಕೀರ್ತಿ ಪತಾಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಏರಿದಂತಾಗಿದೆ.  ಈ ಮೊದಲು ಏರ್‌ ಶೋ ವನ್ನು ಉತ್ತರ ಪ್ರದೇಶಕ್ಕೆ ವರ್ಗಾಯಿಸಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...