ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿಯಿದ್ದು, ರಾಜಧಾನಿ ಬೆಂಗಳೂರಿನ ಮತದಾರರನ್ನು ಓಲೈಸಲು ಜೆಡಿಎಸ್ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಬೆಂಗಳೂರಿಗಾಗಿ ಪ್ರತ್ಯೇಕ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಬೆಂಗಳೂರಿಗಾಗಿ ಹಲವು ಪ್ರಮುಖ ಭರವಸೆಗಳನ್ನು ಈಡೇರಿಸುವುದಾಗಿ ಜನತಾ ಪ್ರಣಾಳಿಕೆಯಲ್ಲಿ ಜೆಡಿಎಸ್ ಘೋಷಿಸಿದೆ.
* ಸಾಮಾಜಿಕ ಭದ್ರತೆ ಹಾಗೂ ಆರೋಗ್ಯ ಶ್ರೀರಕ್ಷೆ
* ಮಹಾನಗರ ಪಾಲಿಕೆ ಆಡಳಿತ ಸುಧಾರಣೆ
* ಶಿಕ್ಷಣ
* ಆರೋಗ್ಯ
*ಮಹಿಳಾ ಸುರಕ್ಷತೆ
* ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ
* ನಗರದಲ್ಲಿ ಹಸಿರೀಕರಣ ಮತ್ತು ಅರಣ್ಯೀಕರಣ
* ನಗರದಲ್ಲಿ ಕಣಿವೆ, ಕೆರೆಗಳ ಸಂರಕ್ಷಣೆ, ಕಾಲುವೆಗಳ ಪುನಶ್ಚೇತನ
* ಕೋರಮಂಗಲ-ಚೆಲ್ಲಘಟ್ಟ ವ್ಯಾಲಿ ಏತನೀರಾವರಿ ಯೋಜನೆ ಆಧುನೀಕರಣ
*ಪರಿಸರ ಸ್ನೇಹಿ ಬೆಂಗಳೂರು ನಿರ್ಮಾಣ
*ಸಿಲಿಕಾನ್ ಸಿಟಿ ಪುನರ್ನಿರ್ಮಾಣ
*ನಮ್ಮ ಮೆಟ್ರೋ ವಿಸ್ತರಣೆ
* ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕ್ಷಾಮ ಬಗೆಹರಿಸುವುದು
*ವಸತಿ ಆಸರೆ
* ಖಾಸಗಿ ಶಾಲಾ ಶಿಕ್ಷಕರು, ಆಟೋ ಚಾಲಕರು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಭದ್ರತೆ
*ಪಿಂಚಣಿ ಯೋಜನೆ
* ಸ್ವಚ್ಛ ಬೆಂಗಳೂರು
* ಪೌಷ್ಠಿಕತೆ-ಪೋಷಣೆ
* ಶಿಕ್ಷಣವೇ ಆಧುನಿಕ ಶಕ್ತಿ – ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದೆ