ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲಿ ಕ್ಷಣ ಕ್ಷಣಕ್ಕೂ ಕೋವಿಡ್ ಆತಂಕ ಹೆಚ್ಚುತ್ತಿದೆ. ಚೀನಾದಿಂದ ಆಗಮಿಸಿರುವ ವ್ಯಕ್ತಿ ಸೇರಿದಂತೆ 12 ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದು, ಡಿಸೆಂಬರ್ 24 ರ ಹೊತ್ತಿಗೆ, ಬೆಂಗಳೂರಿನ ಕೆಐಎಎಲ್ಗೆ ಆಗಮಿಸಿದ 2867 ಪ್ರಯಾಣಿಕರಿಗೆ ಕೋವಿಡ್ -19 ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ 12 ಜನರು ಧನಾತ್ಮಕವಾಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಕೊರೊನಾ ರೂಪಾಂತರಿ ಪತ್ತೆಹಚ್ಚಲು ಎಲ್ಲಾ 12 ಸೋಂಕಿತರ ಮಾದರಿಗಳನ್ನು ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಗಳು ಹೆಚ್ಚುತ್ತಿದ್ದು, BF.7 ವೈರಸ್ ಆತಂಕಕ್ಕೂ ಇಮ್ಮಡಿಗೊಂಡಿದೆ.