ಬೆಂಗಳೂರು: ಕೊರೊನಾ 4ನೇ ಅಲೆ ಆತಂಕ ಎದುರಾಗಿದ್ದು, ಮುಂಜಾಗೃತಾ ಕ್ರಮವಾಗಿ ಬಿಬಿಎಂಪಿ ಬೂಸ್ಟರ್ ಡೋಸ್ ಮೊರೆ ಹೋಗಿದೆ. ಕಡ್ಡಾಯ ಬೂಸ್ಟರ್ ಡೋಸ್ ಗಾಗಿ ಸಿದ್ಧತೆ ನಡೆಸಿದೆ.
ಕೋವಿಡ್ ಎರಡು ಹಾಗೂ ಮೂರನೇ ಅಲೆ ಸಂದರ್ಭದಲ್ಲಿ ಜನರು ಲಸಿಕಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತಿದ್ದರು, ವ್ಯಾಕ್ಸಿನ್ ಅಭಾವ ಕೂಡ ಉಂಟಾಗಿತ್ತು. ನಾಲ್ಕನೆ ಅಲೆ ಮುನ್ಸೂಚನೆ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಬೂಸ್ಟರ್ ಡೋಸ್ ಘೋಷಣೆ ಮಾಡಿತ್ತು. ಸರ್ಕಾರ ಬೂಸ್ಟರ್ ಡೋಸ್ ನೀಡಲು ಮುಂದಾದರೂ ಜನರು ಮಾತ್ರ ಲಸಿಕೆ ಪಡೆಯಲು ಮುಂದಾಗುತ್ತಿಲ್ಲ.
ಇದೀಗ ಕೋವಿಡ್ 4ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಕಡ್ಡಾಯಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಪ್ರತಿಯೊಬ್ಬ ಅರ್ಹರು ಬೂಸ್ಟರ್ ಡೋಸ್ ಪಡೆಯುವಂತೆ ಪಾಲಿಕೆ ಸೂಚನೆ ನೀಡಿದೆ. ನಾಲ್ಕನೇ ಅಲೆ ಉಲ್ಬಣಗೊಳ್ಳುವ ಮುನ್ನ ಬೂಸ್ಟರ್ ಡೋಸ್ ನೀಡಬೇಕು ಎಂಬುದು ಪಾಲಿಕೆ ಉದ್ದೇಶ.
ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಯುಪಿಹೆಚ್ ಸಿ ಸೆಂಟರ್ ಗಳಲ್ಲಿ ಬೂಸ್ಟರ್ ಡೋಸ್ ಲಭ್ಯವಿರುವಂತೆ, ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಡೋಸ್ ನೀಡಲು ತಯಾರಿ ನಡೆಸಿದೆ.