ಕಲಬುರಗಿ ಜಿಲ್ಲೆ, ಚಿಂಚೋಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಬುಧವಾರ ತಡರಾತ್ರಿ ಭೂಮಿಯಿಂದ ಸ್ಪೋಟದ ಸದ್ದು ಕೇಳಿಸಿದ್ದು, ಇದರಿಂದ ಜನ ಭಯಭೀತರಾದ ಘಟನೆ ನಡೆದಿದೆ.
ಗಣಪತಿ ಹಬ್ಬದ ಪ್ರಯುಕ್ತ ಚಿಮ್ಮಾಇದಲಾಯಿ ಗ್ರಾಮದಲ್ಲಿ ಗ್ರಾಮಸ್ಥರು ಭಜನೆ ಮಾಡುತ್ತಿದ್ದು, ಸ್ಫೋಟದ ಸದ್ದು ಕೇಳುತ್ತಿದ್ದಂತೆ ದೇವಾಲಯದಿಂದ ಹೊರಗೋಡಿ ಬಂದಿದ್ದಾರೆ.
ಇನ್ನು ದಸ್ತಾಪುರ, ಅಣವಾರ, ಗೌಡನಹಳ್ಳಿ, ನೀಮ ಹೊಸಳ್ಳಿ ಹಾಗೂ ಇಂದ್ರಪಾಡ ಹೊಸಳ್ಳಿ ಗ್ರಾಮಗಳಲ್ಲೂ ಜನತೆಗೆ ಇದೆ ಅನುಭವವಾಗಿದ್ದು, ತಡರಾತ್ರಿ 10.58 ರ ಸುಮಾರಿಗೆ ಭೂಮಿಯಿಂದ ಎರಡು ಬಾರಿ ಜೋರಾಗಿ ಧಡ್ ಎಂಬ ಶಬ್ದ ಕೇಳಿ ಬಂದಿದೆ. ಇದರಿಂದ ಭೀತಿಗೊಂಡ ಜನ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಈ ಭಾಗದಲ್ಲಿ ಇದೇ ರೀತಿಯಲ್ಲಿ ಭೂಮಿಯಿಂದ ಸ್ಪೋಟದ ಸದ್ದು ಆಗಾಗ ಕೇಳಿ ಬರುತ್ತಿದೆ ಎನ್ನಲಾಗಿದ್ದು, ಇದಕ್ಕೆ ನಿಖರ ಕಾರಣವನ್ನು ತಜ್ಞರು ಮಾತ್ರ ಹೇಳಬಲ್ಲರು.