ತೆಲಂಗಾಣ: ಶಾಸಕರ ಖರೀದಿಗೆ ಆಪರೇಷನ್ ಕಮಲ ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿ ಮೂವರಿಗೆ ಎಸ್ ಐಟಿ ಲುಕ್ ಔಟ್ ನೋಟೀಸ್ ಜಾರಿ ಮಾಡಿದೆ.
ನವೆಂಬರ್ 21ರಂದು ನಿನ್ನೆ ಎಸ್ ಐ ಟಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಇದೀಗ ಲುಕ್ ಔಟ್ ನೋಟೀಸ್ ಜಾರಿ ಮಾಡಲಾಗಿದೆ. ಬಿ.ಎಲ್.ಸಂತೊಷ್, ತುಷಾರ್ ವೆಲ್ಲಪಲ್ಲಿ ಹಾಗೂ ಜಗ್ಗು ಸ್ವಾಮಿ ವಿರುದ್ಧ ಎಸ್ ಐಟಿ ಲುಕ್ ಔಟ್ ನೋಟೀಸ್ ಜಾರಿ ಮಾಡಿದೆ.
ಟಿಆರ್ ಎಸ್ ಶಾಸಕರನ್ನು ಖರೀದಿಸಲು 100 ಕೋಟಿ ಹಣದ ಆಫರ್ ನೀಡಿದ್ದ ಆರೋಪ ಕೇಳಿಬಂದಿದ್ದು, ಪ್ರಕರಣದಲ್ಲಿ ಬಿ.ಎಲ್.ಸಂತೋಷ್ ಹೆಸರು ಪ್ರಮುಖವಾಗಿ ಕೆಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನೋಟೀಸ್ ಜಾರಿಯಾಗಿದೆ.