ರಾಂಚಿ: ಬಿಹಾರ ಮಾಜಿ ಸಿಎಂ, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಮೇವು ಹಗರಣದ 5ನೇ ಪ್ರಕರಣದಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಮೇವು ಹಗರಣದ 5ನೇ ಪ್ರಕರಣ ಡೊರಂಡ ಖಜಾನೆ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ನ್ಯಾಯಾಲಯ ಜಾಮೀನು ನೀಡಿದೆ.
EARTH DAY SPECIAL: ಊಟದ ನಂತರ ಚಮಚ, ತಟ್ಟೆಯನ್ನೂ ತಿನ್ನಬಹುದು: ಪ್ಲಾಸ್ಟಿಕ್ ನಿಯಂತ್ರಣಕ್ಕೆ ವಿಶ್ವವೇ ಕಂಡುಕೊಂಡ ಹೊಸ ಮಾರ್ಗ
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಲಯ ಲಾಲು ಪ್ರಸಾದ್ ಯಾದವ್ ದೋಷಿ ಎಂದು ಪರಿಗಣಿಸಿ 5 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿತ್ತು. ಆದರೆ ಲಾಲು ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣಕ್ಕೆ ಜಾರ್ಖಂಡ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಈ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ಯಾದವ್ ಶೀಘ್ರದಲ್ಲಿಯೇ ಜೈಲಿನಿಂದ ಬಿಡುಗಡೆಯಾಗಲಿದ್ದು, 1 ಲಕ್ಷ ರೂ ಶ್ಯೂರಿಟಿ ಮೊತ್ತ 10 ಲಕ್ಷ ರೂ ದಂಡವಾಗಿ ಠೇವಣಿ ಮಾಡುವಂತೆ ಕೋರ್ಟ್ ಸೂಚಿಸಿದೆ ಎಂದು ಲಾಲು ಪ್ರಸಾದ್ ಪರ ವಕೀಲರು ತಿಳಿಸಿದ್ದಾರೆ.