ಬೆಂಗಳೂರು: ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮೊಹಮದ್ ನಲಪಾಡ್ ಗೆ ಅಧ್ಯಕ್ಷ ಸ್ಥಾನ ಕೈತಪ್ಪಿವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.
ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಲ್ಲಿ ಶೀತಲ ಸಮರ ಆರಂಭವಾಗಿದ್ದು, ಡಿ.ಕೆ. ಶಿವಕುಮಾರ್ V/S ಸಿದ್ದರಾಮಯ್ಯ ಎನ್ನುವಂತಾಗಿದೆ. ಬಿಟ್ ಕಾಯಿನ್ ಹಗರಣದ ಚಾರ್ಜ್ ಶೀಟ್ ನಲ್ಲಿ ನಲಪಾಡ್ ಹೆಸರು ಉಲ್ಲೇಖವಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಇಂತಹ ಸಂದರ್ಭದಲ್ಲಿ ನಲಪಾಡ್ ಅಧ್ಯಕ್ಷನಾದರೆ ಪಕ್ಷದ ಆಂತರಿಕ ವರ್ಚಸ್ಸಿಗೆ ತೊಂದರೆಯಾಗಬಹುದು ಎಂಬ ಚರ್ಚೆ ಕೈ ಪಾಳಯದಲ್ಲಿ ಆರಂಭವಾಗಿದೆ.
ಆಹಾರ ಪ್ರಿಯರ ಚರ್ಚೆಗೆ ಕಾರಣವಾಗಿದೆ ಈ ವಿಚಿತ್ರ ಕಾಂಬಿನೇಷನ್ ಖಾದ್ಯ
ಡಿ.ಕೆ. ಶಿವಕುಮಾರ್ ನಲಪಾಡ್ ಪರವಾಗಿ ನಿಂತಿದ್ದರೆ ಇನ್ನೊಂದೆಡೆ ಸಿದ್ದರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಕ್ಷಾ ರಾಮಯ್ಯ ಪರ ಇದ್ದಾರೆ. ಬಿಟ್ ಕಾಯಿನ್ ವಿಚಾರದಲ್ಲಿ ನಲಪಾಡ್ ಹೆಸರು ಕೂಡ ಕೇಳಿಬರುತ್ತಿರುವುದರಿಂದ ರಕ್ಷಾ ರಾಮಯ್ಯ ಅವರನ್ನೇ ಮುಂದುವರೆಸುವಂತೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಒಟ್ಟಾರೆಯಾಗಿ ನಲಪಾಡ್ ಗೆ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಕೈತಪ್ಪಲಿದೆಯೇ ಕಾದುನೋಡಬೇಕಿದೆ.