alex Certify BIG NEWS: ಬಿಟ್ ಕಾಯಿನ್ ಬಡಿದಾಟ; ಅಪ್ರಿಯ ಸತ್ಯ ಹೇಳುತ್ತೇವೆ ಎಂದು ಪುತ್ರನ ಫೋಟೋ ಮೂಲಕ ವಿಪಕ್ಷ ನಾಯಕನಿಗೆ ಕುಟುಕಿದ ಬಿಜೆಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಟ್ ಕಾಯಿನ್ ಬಡಿದಾಟ; ಅಪ್ರಿಯ ಸತ್ಯ ಹೇಳುತ್ತೇವೆ ಎಂದು ಪುತ್ರನ ಫೋಟೋ ಮೂಲಕ ವಿಪಕ್ಷ ನಾಯಕನಿಗೆ ಕುಟುಕಿದ ಬಿಜೆಪಿ

ಬೆಂಗಳೂರು: ಬಿಟ್ ಕಾಯಿನ್ ಬಡಿದಾಟ ರಾಜಕೀಯ ತಿರುವು ಪಡೆದುಕೊಂಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ಘಟಕ ಇದೀಗ ಕೆಲ ಫೋಟೋಗಳನ್ನು ಬಿಡುಗಡೆ ಮಾಡುವುವ ಮೂಲಕ ಸಿದ್ದರಾಮಯ್ಯ ಪುತ್ರನ ವಿರುದ್ಧವೂ ಪರೋಕ್ಷ ಆರೋಪ ಮಾಡಿದೆ.

ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣದ ಬಗ್ಗೆ ಪ್ರಸ್ತಾಪಿಸಿರುವ ಸಿದ್ದರಾಮಯ್ಯನವರೇ ಹ್ಯಾಕರ್ ಶ್ರೀಕಿ ಜೊತೆಗೆ ಹೇಮಂತ್ ಮುದ್ದಪ್ಪ ಹಾಗೂ ಸುನೀಶ್ ಹೆಗ್ಡೆ ಗಾಢ ಸ್ನೇಹ ಹೊಂದಿದ್ದರು. ಶ್ರೀಕಿ ಮೂಲಕ ಗೇಮಿಂಗ್ ಸೈಟ್ ಮತ್ತು ಇ-ಪೋರ್ಟಲ್ ಹ್ಯಾಕ್ ಮಾಡಿಸಿದ್ದರು ಎಂಬುದು ಪೊಲೀಸ್ ದಾಖಲೆಯಲ್ಲಿದೆ. ಸುನೀಶ್ ಹೆಗ್ಡೆ ಮತ್ತು ಹೇಮಂತ್ ಯಾರ ಜೊತೆಗಿದ್ದಾರೆ ಎಂಬುದನ್ನು ನೋಡಿ ಬುರುಡೆರಾಮಯ್ಯ ಎಂದು ಟ್ವಿಟರ್ ನಲ್ಲಿ ಫೋಟೋ ಬಿಡುಗಡೆ ಮಾಡಿದೆ.

ಸಲೀಸಾಗಿ ಕಬ್ಬಿಣದ ಬೇಲಿ ದಾಟಿದ ಕಾಡಾನೆ: ವಿಡಿಯೋ ವೈರಲ್

ಚಿತ್ರದಲ್ಲಿರುವ ಸನೀಶ್ ಹೆಗ್ಡೆ ಮತ್ತು ಹೇಮಂತ್ ಜೊತೆಗಿರುವ ಎಲ್ಲರನ್ನೂ ನೀವು ಗುರುತಿಸಬಲ್ಲಿರಿ ಎಂಬುದು ನಮ್ಮ ನಂಬಿಕೆ. ಆ ನಂಬಿಕೆ ನಿಜವೇ ಆದರೆ ಹ್ಯಾಕಿಂಗ್ ದಂಧೆ ನಿಮ್ಮ ಕಾಲದಲ್ಲೇ ಆರಂಭವಾಗಿತ್ತು. ಈ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿದ್ದೀರಿ ಅಲ್ಲವೇ ಎಂದು ಪ್ರಶ್ನಿಸಿದೆ. ಡ್ರಗ್ಸ್, ಬಿಟ್ ಕಾಯಿನ್ ಅವ್ಯವಹಾರ ಬಹಿರಂಗವಾಗಿದ್ದು ನಿಮ್ಮ ಕಾಲದಲ್ಲಿ. ಒಂದೆರಡು ಕಡೆ ದಾಳಿ ನಡೆದರೂ ತನಿಖೆ ಹಠಾತ್ ಸ್ಥಗಿತಗೊಂಡಿತು ಎಂದು ಹೇಳಿದೆ.

ಬಿಟ್ ಕಾಯಿನ್ ನಲ್ಲಿ ಪ್ರಭಾವಿಗಳಿದ್ದಾರೆ ಎಂದು ಆರೋಪಿಸಿದ್ದ ಸಿದ್ದರಾಮಯ್ಯ, ಈಗ ದಾಖಲೆಗಳೇ ಇಲ್ಲ ಎನ್ನುತ್ತಿದ್ದಾರೆ. ನಿಮ್ಮ ಅತ್ಯಾಪ್ತರ ವಹಿವಾಟು ನಿಮ್ಮನ್ನು ಅಸಹಾಯಕನನ್ನಾಗಿ ಮಾಡಿದೆಯೇ? ಬಿಟ್ ಕಾಯಿನ್ ಪ್ರಭಾ ವಲಯ ನಿಮ್ಮನ್ನೇ ಸುತ್ತಿಕೊಳ್ಳಬಹುದೆಂಬ ಭಯ ಕಾಡುತ್ತಿದೆಯೇ? ಮುಳುಗುತ್ತಿದ್ದವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ತಮ್ಮ ನಾಯಕತ್ವ ದುರ್ಬಲವಾಗುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಬಿಟ್ ಕಾಯಿನ್ ಆಸರೆಯಾಗಿದೆ. ಒಂದು ಚಿತ್ರ ಸಾವಿರ ಕಥೆ ಹೇಳುವಂತಿದೆ ಎಂದು ವ್ಯಂಗ್ಯವಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...