ಬೆಂಗಳೂರು: ರಾಜಕೀಯ ನಾಯಕರ ಕೆಸರೆರಚಾಟದ ನಡುವೆಯೇ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಇದೀಗ ಆರೋಪಿ ಶ್ರೀಕಿ ಲ್ಯಾಪ್ ಟಾಪ್ ನಲ್ಲಿ 76 ಲಕ್ಷ ಪ್ರೈವೇಟ್ ಕೀ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಬಿಟ್ ಕಾಯಿನ್ ಖಾತೆಗೆ ಪ್ರವೇಶಿಸಲು ಬಳಸುವ 76 ಲಕ್ಷ ಪ್ರೈವೇಟ್ ಕೀ ಗಳು ಪತ್ತೆಯಾಗಿವೆ ಎಂದು ವಿಧಿವಿಜ್ಞಾನ ವಿಶ್ಲೇಷಣಾ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಹೊಂಡದಲ್ಲಿ ಸಿಲುಕಿದ್ದ ಹಸುವಿನ ರಕ್ಷಣಾ ಕಾರ್ಯಾಚರಣೆಗೆ ಪಂಜಾಬ್ ಸಿಎಂ ಸಹಾಯ ಹಸ್ತ: ವಿಡಿಯೋ ವೈರಲ್
ಶ್ರೀಕೃಷ್ಣನ ಕ್ಲೌಡ್ ಅಕೌಂಟ್ ನಲ್ಲಿ 27 ಇ-ವ್ಯಾಲೆಟ್, ಪ್ರೈವೇಟ್ ಕೀ, ವಿಳಾಸಗಳು ಪತ್ತೆಯಾಗಿವೆ ಎಂದು ಕೂಡ ತಿಳಿದುಬಂದಿದೆ.
ಈ ನಡುವೆ ಹೋಟೆಲ್ ಒಂದರಲ್ಲಿ ಗಲಾಟೆ ವೇಳೆ ವಶಪಡಿಸಿಕೊಳ್ಳಲಾಗಿದ್ದ ಶ್ರೀಕಿ ಲ್ಯಾಪ್ ಟಾಪ್ ನ್ನು ಸಿಐಡಿಗೆ ರವಾನೆ ಮಾಡಲಾಗಿದೆ. ಸಿಐಡಿ ಸೈಬರ್ ತಜ್ಞರು ಲ್ಯಾಪ್ ಟಾಪ್ ಪರಿಶೀಲನೆ ಮಾಡಲಿದ್ದಾರೆ. ಪರಿಶೀಲನೆ ಬಳಿಕ ಹ್ಯಾಕಿಂಗ್ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ಹೊರಬೀಳಲಿದೆ.