ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಅವರನ್ನು ಮೊದಲು ಬಂಧಿಸಿ, ತನಿಖೆಗೆ ಒಳಪಡಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಯಾರು ಇದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಪ್ರಕರಣದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವ ನಾಯಕರೇ ಭಾಗಿಯಾಗಿರಲಿ ಅವರನ್ನು ಅರೆಸ್ಟ್ ಮಾಡಲಿ ಎಂದರು.
ಟಿ ಟ್ವೆಂಟಿ ವಿಶ್ವಕಪ್: ಇಂದು ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಸೆಮಿಫೈನಲ್ ಪಂದ್ಯ
ಬಿಟ್ ಕಾಯಿನಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಮೊದಲು ಹೆಸರು ಬಹಿರಂಗಪಡಿಸಲಿ. ಒಂದು ವೇಳೆ ಹೇಳದಿದ್ದರೆ ಬಿಡಿ ನಾವೇ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಹೇಳುತ್ತೇವೆ. ನಾನು ಎವಿಡೆನ್ಸ್ ಇಲ್ಲದೇ ಮಾತನಾಡಲ್ಲ. ಸೂಕ್ತ ಸಮಯದಲ್ಲಿ ಹೆಸರನ್ನು ಬಹಿರಂಗಪಡಿಸುತ್ತೇನೆ ಎಂದರು.
ನಾವು ಯಾರನ್ನೂ ಬ್ಲಾಕ್ ಮೇಲ್ ಮಾಡುತ್ತಿಲ್ಲ. ಪ್ರಕರಣದಲ್ಲಿ ಕಾಂಗ್ರೆಸ್ ನವರು ಶಾಮೀಲಾಗಿದ್ದರೆ ಈ ಬಗ್ಗೆಯೂ ತನಿಖೆಯಾಗಲಿ. ಸಿಎಂ ಬೊಮ್ಮಾಯಿ ಹೇಳುತ್ತಿರುವುದು ನೋಡಿದರೆ ನನಗೆ ಬೊಮ್ಮಾಯಿ ಬಗ್ಗೆಯೇ ಅನುಮಾನ ಬರುತ್ತಿದೆ. ಅನಗತ್ಯವಾಗಿ ನಮ್ಮ ವಿರುದ್ಧ ಆರೋಪ ಮಾಡಿ ಹೇಳಿಕೆ ಕೊಡುವ ಬದಲು. ಈಗಿರುವುದು ಬಿಜೆಪಿಯವರದ್ದೇ ಸರ್ಕಾರ ಅಂದ ಮೇಲೆ ಪ್ರಕರಣವನ್ನು ತನಿಖೆಗೆ ನೀಡಿ, ತಪ್ಪಿತರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.