ಮೈಸೂರು: ರಾಜ್ಯದಲ್ಲಿ ಬಿಟ್ ಕಾಯಿನ್ ದಂಧೆ ಕುರಿತ ಚರ್ಚೆ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಬಿಟ್ ಕಾಯಿನ್ ಎಂದರೇನು? ಎಂಬ ಬಗ್ಗೆ ಮೊದಲು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಲಿ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, 13 ಬಾರಿ ಬಜೆಟ್ ಮಂಡನೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಬಿಟ್ ಕಾಯಿನ್ ಬಗ್ಗೆ ತಿಳಿದಿರಲೇಬೇಕು. 13 ಬಾರಿ ಬಜೆಟ್ ಮಂಡನೆ ಮಾಡುವುದು ಸಣ್ಣ ವಿಚಾರವಲ್ಲ. ಅರ್ಥಶಾಸ್ತ್ರಜ್ಞರಾಗಿರಬೇಕು. ಹೀಗಾಗಿ ಅರ್ಥಶಾಸ್ತ್ರಜ್ಞರಾಗಿರುವ ಸಿದ್ದರಾಮಯ್ಯ ಬಿಟ್ ಕಾಯಿನ್ ಎಂದರೇನು? ಅದನ್ನು ಖರೀದಿಸುವುದು ಹೇಗೆ? ವ್ಯವಹಾರಗಳು ಹೇಗೆ ನಡೆಯುತ್ತೆ ಎಂಬ ಬಗ್ಗೆ ಮೊದಲು ಸ್ಪಷ್ಟಪಡಿಸಲಿ ಎಂದರು.
ಬೆಳಿಗ್ಗೆ ಈ ಜ್ಯೂಸ್ ಸೇವನೆ ಮಾಡಿದ್ರೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ……?
ಬಿಟ್ ಕಾಯಿನ್ ವಿಚಾರ ಪ್ರಸ್ತಾಪವಾಗಿದ್ದು ಇಂದು ನಿನ್ನೆಯಲ್ಲ, ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿಯೇ ಈ ವಿಚಾರಗಳು ಚರ್ಚೆಗೆ ಬಂದಿತ್ತು. ಅಂದ ಮೇಲೆ ಬಿಟ್ ಕಾಯಿನ್, ಕ್ರಿಸ್ಪೋ ಕಾಯಿನ್ ಬಗ್ಗೆ ಅವರಿಗೆ ತಿಳಿದಿರಲೇಬೇಕು. ಸಿದ್ದರಾಮಯ್ಯ ಈ ಬಗ್ಗೆ ವಿವರಿಸಲಿ ಎಂದು ಹೇಳಿದರು.
ಇನ್ನು ಬಿಟ್ ಕಾಯಿನ್ ದಂಧೆ ಕೇಸ್ ನಲ್ಲಿ ಚಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ನ ಇಬ್ಬರು ನಾಯಕರ ಮಕ್ಕಳ ಹೆಸರಿದೆ. ಹಾಗಾಗಿ ಕೈ ನಾಯಕರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬೇಕಾಗಿಯೂ ಬರಬಹುದು. ಶಾಸಕ ಪ್ರಿಯಾಂಕ್ ಖರ್ಗೆ ಚಿತ್ತವಿಲ್ಲದೇ ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.