ಬೆಂಗಳೂರು: ರಾಜ್ಯ ಸರ್ಕಾರದ ಶಿಕ್ಷಣ ನೀತಿ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್, ಮಕ್ಕಳ ಭವಿಷ್ಯವನ್ನೇ ಸರ್ಕಾರ ಹಾಳು ಮಾಡಲು ಹೊರಟಿದೆ ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ.
ಬಿಜೆಪಿ ಸರ್ಕಾರದ ಶಿಕ್ಷಣ ನೀತಿ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಮೊದಲಿಂದಲೂ ಹೇಳುತ್ತಿದ್ದೆವು, ಈಗ ಸರ್ಕಾರದ ಸಮೀಕ್ಷೆಯಲ್ಲೇ ಬಹಿರಂಗವಾಗಿದೆ.
ಬಿಜೆಪಿಯ ಶೈಕ್ಷಣಿಕ ಅವಾಂತರಗಳು ಹಾಗೂ NEP ನೀತಿಯಿಂದ ಮಕ್ಕಳಲ್ಲಿ ಕಲಿಕೆ ಹಾಗೂ ಮಾನಸಿಕತೆಯಲ್ಲಿ ದುಷ್ಪರಿಣಾಮ ಬೀರುತ್ತಿದೆ. ಈಗಲಾದರೂ ಸರ್ಕಾರ ತಜ್ಞರ ಸಲಹೆಗಳಿಗೆ ಮನ್ನಣೆ ಕೊಡಲಿ ಎಂದು ಆಗ್ರಹಿಸಿದೆ.
ಇದೇ ವೇಳೆ ‘ಹೊರರಾಜ್ಯಗಳ ವಿಶ್ವವಿದ್ಯಾಲಗಳಲ್ಲೂ ಕನ್ನಡ ಬೋಧನೆಗೆ ಕ್ರಮ ಕೈಗೊಳ್ಳುತ್ತೇವೆ’ ಎನ್ನುವುದು ಬಿಜೆಪಿಯ ಪ್ರಣಾಳಿಕೆಯ ಭರವಸೆ. ಹೊರರಾಜ್ಯಗಳಲ್ಲಿ ಇರಲಿ, ಕರುನಾಡಿನಲ್ಲೇ ಕನ್ನಡವನ್ನು ಅನಾಥವಾಗಿಸಿದೆ ಬಿಜೆಪಿ. ಕನ್ನಡ ಸಾಹಿತ್ಯ, ಸಂಸ್ಕೃತಿಯ ಚಟುವಟಿಕೆಗಳಿಗೆ, ಹಂಪಿ ವಿವಿಗೆ ಅನುದಾನದ ನೀಡದೆ ವಂಚಿಸಿದೆ. ಇದಕ್ಕೆ ಉತ್ತರ ಕೊಡಿ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಒತ್ತಾಯಿಸಿದೆ.