ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಸಭೆ ಆರಂಭಿಸಿದ್ದು, ನಾಳೆಯಿಂದ ಆರಂಭವಾಗಲಿರುವ ಲಸಿಕಾ ಮೇಳದ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.
ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಜೆ.ಪಿ.ನಡ್ಡಾ ನಡೆಸಿರುವ ವಿಡಿಯೋ ಕಾನ್ಫರೆನ್ಸ್ ಇದಾಗಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಸುಧಾಕರ್ ಭಾಗವಹಿಸಿದ್ದಾರೆ.
BIG NEWS: ನೀರಾವರಿ ಇಲಾಖೆಯಲ್ಲಿ ಅಕ್ರಮ ಆರೋಪ; ಸತ್ಯಾಸತ್ಯತೆ ಗೊತ್ತಾದ ಬಳಿಕ ತನಿಖೆ ಅಗತ್ಯವಿಲ್ಲ ಎಂದ ಗೃಹ ಸಚಿವ
ನಾಳೆಯಿಂದ ರಾಜ್ಯದಲ್ಲಿ ಲಸಿಕಾ ಮೇಳ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿಯೂ ಚರ್ಚೆ ನಡೆಸಲಿದ್ದಾರೆ. ಕೇಂದ್ರದ ಉಚಿತ ಲಸಿಕೆ ಸಮರ್ಪಕ ಬಳಕೆ, ಅನ್ ಲಾಕ್ 2.0 ಜಾರಿ, ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿ, ಕೋವಿಡ್ ಮೂರನೇ ಅಲೆಗೆ ಸಿದ್ಧತೆ ಹಾಗೂ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ, ಪಕ್ಷ ಸಂಘಟನೆ ವಿಚಾರವಾಗಿಯೂ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.