ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಪತ್ನಿ ಸುಮಾ ಹಾಗೂ ರೇಖಾ ನಡುವಿನ ಸಂಭಾಷಣೆ ಕುರಿತ ಮತ್ತೊಂದು ಆಡಿಯೋ ವೈರಲ್ ಆಗಿದೆ.
ಪರಸ್ತ್ರೀ ವ್ಯಾಮೋಹಕ್ಕೆ ಸಿಲುಕಿ ರೇಖಾ ಎಂಬ ಮಹಿಳೆಯ ಬ್ಲಾಕ್ ಮೇಲ್ ಗೆ ಒಳಗಾಗಿ ಹಣ ಕಳೆದುಕೊಂಡು ಪತ್ನಿಗೆ ಮುಖ ತೋರಿಸಲೂ ಆಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಅನಂತರಾಜು ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.
‘ಗ್ಯಾಸ್’ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು
ಪತಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾಗಿ ಪತ್ನಿ ಸುಮಾ ಗಂಡನಿಗೆ ಬೆದರಿಸಿದ್ದರು. ಅಲ್ಲದೆ ಅನಂತರಾಜು ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು. ಅದಾದ ಬಳಿಕ ಸುಮಾ ಹಾಗೂ ರೇಖಾ ಇಬ್ಬರು ಸೇರಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎನ್ನಲಾಗಿತ್ತು. ಆದರೆ ಈಗ ಅನಂತರಾಜು ಡೆತ್ ನೋಟ್ ಇಟ್ಟುಕೊಂಡು ಸುಮಾ, ರೇಖಾಗೆ ಧಮ್ಕಿ ಹಾಕಿದ್ದು, ಯಾವಾಗ ಬೇಕಾದರು ನಿನ್ನ ಮೇಲೆ ಕೇಸ್ ಹಾಕಬಹುದು ಎಂದು ಬೆದರಿಕೆಯೊಡ್ದಿರುವುದು ಗೊತ್ತಾಗಿದೆ.
ಆರಂಭದಲ್ಲಿ ಆಡಿಯೋ ವೈರಲ್ ಆದ ಬಳಿಕ ಠಾಣೆಗೆ ಕರೆಸಿ ಸುಮಾಳನ್ನು ಪೊಲೀಸರು ವಿಚರಣೆ ನಡೆಸಿದಾಗ, ಪತಿಯ ಮೇಲಿನ ಪ್ರೀತಿಗೆ ತಾನು ಬೈದು ಬುದ್ಧಿ ಹೇಳಿದ್ದೆ. ರೇಖಾ ಸಹವಾಸ ಬಿಟ್ಟು ಬದಲಾಗು. ಹಳೆಯದೆಲ್ಲವನ್ನು ಮರೆತು ಹೆಂಡತಿ ಮಕ್ಕಳೊಂದಿಗೆ ಚೆನ್ನಾಗಿರು ಮೊದಲಿನಂತೆಯೇ ಜೀವನ ನಡೆಸೋಣ ಎಂದು ಹೇಳಿದ್ದೆ. ಅದಾದ ಬಳಿಕ ಪತಿ ಅನಂತರಾಜು ತನ್ನೊಂದಿಗೆ ಚೆನ್ನಾಗಿದ್ದರು. ಮಕ್ಕಳೊಂದಿಗೆ ನಾವು ಹೊರಗಡೆ ಸುತ್ತಾಡಲೂ ಹೋಗಿದ್ದೆವು ಎಂದು ವಿವರಿಸಿದ್ದಳು ಎನ್ನಲಾಗಿದೆ.
ಆದರೆ ಈಗ ಮತ್ತೊಂದು ಆಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಆಡಿಯೋ ಎಡಿಟ್ ಮಾಡಿ ರೇಖಾ ಹಾಗೂ ಗ್ಯಾಂಗ್ ಒಂದೊಂದೆ ಆಡಿಯೋ ವೈರಲ್ ಮಾಡುತ್ತಿದ್ದಾರೆಯೇ? ಪ್ರಕರಣವನ್ನು ಅನಂತರಾಜು ಪತ್ನಿ ರೇಖಾ ಮೇಲೆ ಹಾಕಲು ಸಂಚು ರೂಪಿಸುತ್ತಿದ್ದಾರಾ ಎಂಬ ಅನುಮಾನ ಕೂಡ ಪೊಲೀಸರಿಗೆ ಆರಂಭವಾಗಿದೆ.