ಬೆಂಗಳೂರು: ಮೈತ್ರಿ ಸರ್ಕಾರ ಉರುಳಿಸಲು ಕುತಂತ್ರ ಮಾಡಿದ್ದು ಬಿಜೆಪಿ, ಬಿಜೆಪಿ ನಯಕರ ಷಡ್ಯಂತ್ರದಿಂದಾಗಿಯೇ ಸರ್ಕಾರ ಉರುಳಿತು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇತಗಾನಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಬಿಜೆಪಿ, ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬದ್ಧತೆ ಇಲ್ಲ. ಸಮಾಜದಲ್ಲಿ ಶಾಂತಿ ಕದಡುವ ವಾತಾವರಣ ಸೃಷ್ಟಿಸಿ ವೋಟ್ ಬ್ಯಾಂಕ್ ಮಾಡಲು ಹೊರಟಿದ್ದಾರೆ. ರಾಜಕೀಯ ಲಾಭಕ್ಕಾಗಿ ಇಂತಹ ಕೆಲಸಕ್ಕೆ ಇಳಿಯುವುದು ಅಪಾಯಕಾರಿ ಎಂದರು.
ಟ್ರೈಲರ್ ರಿಲೀಸ್ ಮಾಡಲು ಸಜ್ಜಾದ ‘ಆಚಾರ್ಯ’ ಚಿತ್ರತಂಡ
ಉತ್ತರ ಕರ್ನಾಟಕ ಭಾಗದಲ್ಲಿನ ಅತಿವೃಷ್ಟಿ, ಎರಡು ವರ್ಷ ಕೋವಿಡ್ ಸಂಕಷ್ಟದ ಕಾರಣಕ್ಕೆ ಜನರ ಬದುಕು ಮೊದಲು ಕಟ್ಟಲಿ ಎಂದು ಸುಮ್ಮನಿದ್ದೆ. ರಾಜ್ಯದ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಅವರ ಬಗ್ಗೆ ಯಾರೊಬ್ಬರೂ ಧ್ವನಿಯೆತ್ತುತ್ತಿಲ್ಲ. ಗುತ್ತಿಗೆದಾರರಿಗೆ ನೀಡಲು ರಾಜ್ಯ ಸರ್ಕಾರದ ಬಳಿ ಹಣವಿದೆ. ಎತ್ತಿನ ಹೊಳೆ 5 ಟಿಎಂಸಿಯಿಂದ 2 ಟಿಎಂಸಿಗೆ ಇಳಿದಿದೆ. ಭೂ ಸ್ವಾಧೀನ ಪರಿಹಾರಕ್ಕೆ 300 ಕೋಟಿ ಬೇಕು ಅದಕ್ಕಾಗಿ ಹಣವನ್ನು ಉಳಿಸಲು ಎತ್ತಿನ ಹೊಳೆ ನೀರನ್ನು 2 ಟಿಎಂಸಿಗೆ ಇಳಿಸಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರಕ್ಕೆ ಹನಿ ನೀರೂ ಸಿಕ್ಕಿಲ್ಲ. ಕೃಷ್ಣ ಮೇಲ್ದಂಡೆಗೂ ಸರ್ಕಾರದ ಬಳಿ ಹಣವಿದೆ. ಹೀಗಾಗಿ ಕಾಲಹರಣ ಮಾಡಿಕೊಂಡು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ನೀರು ನಾವು ಬಳಸಲು ರಾಷ್ಟ್ರೀಯ ಪಕ್ಷಗಳಿಗೆ ಬದ್ಧತೆ ಇಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಾತ್ರ ನೀರಾವರಿ ಯೋಜನೆ ಸಾಧ್ಯ. 5 ವರ್ಷ ಜೆಡಿಎಸ್ ಗೆ ಅಧಿಕಾರ ನೀಡಿದರೆ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು. ರಾಜ್ಯದ ಅಭಿವೃದ್ಧಿಗಾಗಿ ಜೆಡಿಎಸ್ ಶ್ರಮಿಸಲಿದೆ ಎಂದು ಭರವಸೆ ನೀಡಿದರು.