ಬೆಳಗಾವಿ: ಕಾಂಗ್ರೆಸ್ ನವರು ಜೆಡಿಎಸ್ ನ್ನು ಬಿಜೆಪಿ ಬಿ ಟಿಂ ಅಂತಾರೆ, ಜೆಡಿಎಸ್ ಅವರು ಕಾಂಗ್ರೆಸ್ ನ್ನು ಬಿ ಟೀಮ್ ಎನ್ನುತ್ತಾರೆ. ಇವೆಡರ ಅರ್ಥವೇನೆಂದರೆ ಬಿಜೆಪಿ ‘ಎ’ ಟೀಮ್ ಎಂಬುದನ್ನು ಎರಡೂ ಪಕ್ಷಗಳು ಒಪ್ಪಿಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಬಿಜೆಪಿ ಎ ಟೀಂ ಎಂಬುದು ಸ್ಪಷ್ಟವಾಗಿರುವಾಗ ಬಿ ಟೀಂ ಯಾರಾದರೂ ನಮಗೆ ಚಿಂತೆ ಇಲ್ಲ. ವಿಧಾನ ಪರಿಷತ್ ಚುನಾವಣೆಗೆ ಮುನ್ನ ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ವಾಸ್ತವದಲ್ಲಿ ನೋಡಿದಾಗ ಬಿಜೆಪಿಗೆ ಉತ್ತಮ ಅವಕಾಶವಿದೆ. ಬಿಜೆಪಿ ಯಲ್ಲಿ ಸಂಪೂರ್ಣ ಒಗ್ಗಟ್ಟಿದೆ ಎಂದರು.
BIG NEWS: ಅವನೇನು ಕತ್ತೆ ಕಾಯುತ್ತಿದ್ನಾ ? ಊಸರವಳ್ಳಿಯಂತೆ ಬಣ್ಣ ಬದಲಾಯಿಸ್ತಾನೆ; HDK ವಿರುದ್ಧ ಶಾಸಕ ಶ್ರೀನಿವಾಸ್ ವಾಗ್ದಾಳಿ
ರಾಜ್ಯಸಭೆಯಲ್ಲಿ ಬಿಜೆಪಿ ಮೊದಲಬಾರಿಗೆ ಮೂರು ಸ್ಥಾನಗಳನ್ನು ಗೆದ್ದಿದೆ. ನಮ್ಮ ಪ್ರಾತಿನಿಧ್ಯ ರಾಜ್ಯ ಸಭೆಯಲ್ಲಿ ಹೆಚ್ಚಾಗಿದೆ. ವಿಧಾನಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ನಾಲ್ಕೂ ಸ್ಥಳಗಳಲ್ಲಿಯೂ ನಾವು ವಿಜೇತರಾಗುವ ವಿಶ್ವಾಸವಿದೆ ಎಂದು ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಅವರಿಗೆ ಸಿಎಂ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನ ವಿರುದ್ಧವೇ ಹೆಚ್ಚು ಮಾತನಾಡುತ್ತಾರೆ. ಅವರು ಬಳಸುವ ಭಾಷೆ ಗಮನಿಸಿ ಸಾಫ್ಟ್ ಅಥವಾ ಹಾರ್ಡ್ ಅನ್ನುವುದನ್ನು ನೀವೇ ತಿಳಿದುಕೊಳ್ಳಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಮಧ್ಯೆ ಹೋಗಬಾರದು ಎಂದು ತೀರ್ಮಾನಿಸಿದ್ದೇನೆ ಎಂದರು.