ಬೆಂಗಳೂರು: ರಾಜೀವ್ ಗಾಂಧಿ ಖೇಲ್ ರತ್ನ ಹೆಸರು ಬದಲಾವಣೆ ಮಾಡುವ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಧ್ಯಾನ್ ಚಂದ್ ಹೆಸರಲ್ಲಿ ಪ್ರಶಸ್ತಿ ನೀಡಬೇಕೆಂದರೆ ಇನ್ನೂ ದೊಡ್ಡ ಪ್ರಶಸ್ತಿ ನೀಡಲಿ, ಅದನ್ನು ಬಿಟ್ಟು ರಾಜೀವ್ ಗಾಂಧಿ ಖೇಲ್ ರತ್ನ ಹೆಸರನ್ನು ಬದಲಾವಣೆ ಮಾಡುವುದು ಬೇಡ ಎಂದರು. ಗುಜರಾತ್ ನಲ್ಲಿ ಮೋದಿ ಕ್ರೀಡಾಂಗಣವಿದೆ. ದೆಹಲಿಯಲ್ಲಿ ಅರುಣ್ ಜೇಟ್ಲಿ ಹೆಸರಲ್ಲಿ ಕ್ರೀಡಾಂಗಣವಿದೆ. ದೀನ್ ದಯಾಳ್ ಉಪಾಧ್ಯಾಯ ಹೆಸರಲ್ಲಿ ಫ್ಲೈಓವರ್ ಇದೆ. ವಾಜಪೇಯಿ ಹೆಸರಲ್ಲಿ ಅನೇಕ ಯೋಜನೆ ಜಾರಿಯಲ್ಲಿದೆ. ಅವುಗಳನ್ನು ನಾವು ಬದಲಾವಣೆ ಮಾಡಿದ್ದೇವೆಯೇ? ಬಿಜೆಪಿ ದುರುದ್ದೇಶದಿಂದ ಹೆಸರು ಬದಲಿಸಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
BIG NEWS: ನೀರಜ್ ಕೋಚ್ ಕಾಶಿನಾಥ್ ಗೆ 10 ಲಕ್ಷ ಬಹುಮಾನ ಘೋಷಿಸಿದ ರಾಜ್ಯ ಸರ್ಕಾರ
ಇದೇ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನಮಾನ ನಿರಾಕರಿಸಿದ್ದು, ಸ್ವಾಗತಾರ್ಹ ಎಂದಿರುವ ಸಿದ್ದರಾಮಯ್ಯ, ಯಡಿಯೂರಪ್ಪ ಒಳ್ಳೆ ಕೆಲಸ ಮಾಡಿದ್ದಾರೆ. ನಾನೇ ಅವರಿಗೆ ಹೇಳಬೇಕು ಅಂತ ಇದ್ದೆ ಎಂದು ಹೇಳಿದ್ದಾರೆ.