ಬೆಂಗಳೂರು: ಸಿದ್ದರಾಮಯ್ಯ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಜಾತಿ ಹುಟ್ಟುಹಾಕಿದ್ದು ಮನುಸ್ಮೃತಿಗಳು, ಮನುವಾದಿಗಳು. ಹೀಗಿರುವಾಗ ಅವರು ನಮಗೆ ಪಾಠ ಹೇಳಿಕೊಡಬೇಕೇ ಎಂದು ಪ್ರಶ್ನಿಸಿದ್ದಾರೆ.
5 ಕೋಟಿ ರೂ. ಮೌಲ್ಯದ ಅಂಬರ್ ಗ್ರೀಸ್ ವಶ: ಇಬ್ಬರು ಅರೆಸ್ಟ್
ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದು, ಚಾತುರ್ವರ್ಣ ವ್ಯವಸ್ಥೆ, ಶ್ರೇಣಿ ವ್ಯವಸ್ಥೆ ಹುಟ್ಟುಹಾಕಿದ್ದು ಯಾರು ? ಅದನ್ನು ಪ್ರತಿಪಾದನೆ ಮಾಡುತ್ತಿರುವವರು ಯಾರು ? ಜಾತಿ ಹುಟ್ಟುಹಾಕಿದ್ದು ಮನುವಾದಿಗಳು, ಮನುವಾದಿಗಳು ಅಂದ್ರೆ ಯಾರು ? ಬಿಜೆಪಿಯವರು. ಅವರಿಂದ ಪಾಠ ಕಲಿಯಬೇಕಿಲ್ಲ ಎಂದರು.
ಕಂಬಳಿ ಹಾಕಿಕೊಂಡು ಸಿಎಂ ವೋಟ್ ಕೇಳಿದ್ದಾರೆ ಇವರು ಕಂಬಳಿ ಹಾಕಿಕೊಂಡ ತಕ್ಷಣ ಗೌರವ ಬರಲ್ಲ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಕಂಬಳಿ ನೇಯುವವರು ಯಾರು ? ಕುರುಬರು ತಾನೆ ? ಮುಖ್ಯಮಂತ್ರಿ ಬೊಮ್ಮಾಯಿ ಅವರ ಜಾತಿಯವರು ನೇಯುತ್ತಾರಾ ? ಅಂದ ಮೇಲೆ ಆ ಗೌರವ ಶ್ರಮ ಯಾರಿಗೆ ಸೇರುತ್ತೆ, ಕುರುಬರಿಗೆ ಅಲ್ವಾ ? ಕಂಬಳಿ ಹಾಕಿದ ತಕ್ಷಣ ಆ ಗೌರವ ಬಂದು ಬಿಡುತ್ತಾ ? ಎಂದು ಕೇಳುವ ಮೂಲಕ ಸಿಎಂ ಬೊಮ್ಮಾಯಿಗೆ ಟಾಂಗ್ ನೀಡಿದರು.
ಚಂಡಮಾರುತದಿಂದ ಗೋಡಂಬಿ ಬೆಳೆ ರಕ್ಷಿಸಲು ನೈಸರ್ಗಿಕ ವಿಧಾನ ಅಭಿವೃದ್ಧಿಪಡಿಸಿದ ಮಹಿಳೆ
ಇದೇ ವೇಳೆ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಜೆಡಿಎಸ್ ನಲ್ಲಿ ದೇವೇಗೌಡರ ಕುಟುಂಬದವರೆಲ್ಲರೂ ಪಕ್ಷದ ಮುಖಂಡರಾಗಿದ್ದಾರೆ. ಜೆಡಿಎಸ್ ರಾಷ್ಟ್ರಾಧ್ಯಕ್ಷರು ಯಾರು ? ರಾಜ್ಯಾಧ್ಯಕ್ಷರು ಯಾರು ? ರಾಜ್ಯದಲ್ಲಿ ಜೆಡಿಎಸ್ ನಾಯಕರು ಯಾರು ಎಂಬುದು ಗೊತ್ತಾಗುತ್ತಿಲ್ಲ. ಹೆಚ್.ಡಿ.ಕೆ. ಜೆಡಿಎಸ್ ರಾಜ್ಯ ನಾಯಕ, ರೇವಣ್ಣ ಲೀಡರ್, ಹೆಚ್.ಡಿ.ಕೆ.ಪತ್ನಿ ಲೀಡರ್, ರೇವಣ್ಣ ಮಗ ಲೀಡರ್, ರೇವಣ್ಣ ಪತ್ನಿಯೂ ಲೀಡರ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು. ಹೆಚ್.ಡಿ. ದೇವೇಗೌಡರು ಜೆಡಿಎಸ್ ರಾಷ್ಟ್ರಾಧ್ಯಕ್ಷರಾಗಿದ್ದರು. ಆಗ ನಾನು ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದೆ. ನಾನು ಪಕ್ಷದ ಅಧ್ಯಕ್ಷನಾಗಿದ್ದಾಗ ಕುಮಾರಸ್ವಾಮಿ ಪಕ್ಷದಲ್ಲಿಯೇ ಇರಲಿಲ್ಲ. ಹೀಗಿರುವಾಗ ಇವರು ಹೇಗೆ ಪಕ್ಷ ಸಂಘಟನೆ ಮಾಡಿದರು ಎಂದು ಪ್ರಶ್ನಿಸಿದ್ದಾರೆ.