ಶಿವಮೊಗ್ಗ; ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ವಲಸೆ ಶಾಸಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವರಿಂದಲೇ ಗೊಂದಲ ಆರಂಭವಾಗಿದೆ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಮೊದಲೇ ಬಿಜೆಪಿಗೆ ಬಹುಮತವಿದ್ದಿದ್ದರೆ ಈಗ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯೇ ಬರುತ್ತಿರಲಿಲ್ಲ. 17 ಶಾಸಕರು ಕಾಂಗ್ರೆಸ್, ಜೆಡಿಎಸ್ ನಲ್ಲಿ ಆಡಳಿತ ಸರಿಯಾಗಿಲ್ಲ ಎಂದು ಆರೋಪಿಸಿ ಆ ಪಕ್ಷ ಬಿಟ್ಟು ಬಂದರು. ಆಮೇಲೆ ಇಂತಹ ಸಮಸ್ಯೆಗಳು ಎದುರಾಗಿವೆ ಎಂದರು.
ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡುತ್ತಿದ್ದು, ನಮ್ಮ ಪಕ್ಷದ ನಾಯಕರ ಜೊತೆ 4 ಗೋಡೆಯ ಮದ್ಯೆ ಎಲ್ಲರೂ ಕೂತು ಚರ್ಚೆ ಮಾಡಿ ಗೊಂದಲಕ್ಕೆ ತೆರೆ ಎಳೆಯುತ್ತೇವೆ. ಕೋರ್ ಕಮಿಟಿ ಸದಸ್ಯರ ಅಭಿಪ್ರಾಯವನ್ನೂ ಅರುಣ್ ಸಿಂಗ್ ಕೇಳಲಿದ್ದಾರೆ ಎಲ್ಲರಿಗೂ ಚರ್ಚೆಗೆ ಮುಕ್ತ ಅವಕಾಶ ನೀಡಲಾಗಿದೆ. ನಾಯಕತ್ವ ಬದಲಾವಣೆ ಚರ್ಚೆಯ ಎಲಾ ಗೊಂದಲಕ್ಕೂ ಕೊನೆ ಹಾಡಲಾಗುತ್ತೆ ಎಂದು ಹೇಳಿದರು.