ವಿವಾದಾತ್ಮಕ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಆರೋಪಕ್ಕೆ ಗುರಿಯಾಗಿರುವ ಹುಬ್ಬಳ್ಳಿಯ ಅಭಿಷೇಕ್ ಹಿರೇಮಠ ಇಂದು ನಡೆಯುತ್ತಿರುವ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗಿದ್ದು, ಬಿಗಿ ಭದ್ರತೆಯಲ್ಲಿ ಪೊಲೀಸರು ಆತನನ್ನು ಕಾರಾಗೃಹದಿಂದ ಕರೆ ತಂದಿದ್ದಾರೆ.
ದ್ವಿತೀಯ ಪಿಯು ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಯಾಗಿರುವ ಅಭಿಷೇಕ್ ಹಿರೇಮಠ ಇಂದು ಮೊದಲ ದಿನದ ಪರೀಕ್ಷೆ ಬರೆಯುತ್ತಿದ್ದು, ಆತನನ್ನು ಪರೀಕ್ಷಾ ಕೇಂದ್ರವಾದ ಮಹೇಶ್ ಕಾಲೇಜಿಗೆ ಆತನನ್ನು ಪೊಲೀಸರು ಕರೆದುಕೊಂಡು ಬಂದಿದ್ದಾರೆ.
ಅಭಿಷೇಕ್ ಹಿರೇಮಠ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಜೆ ಎಂ ಎಫ್ ಸಿ ನ್ಯಾಯಾಲಯ ಅನುಮತಿ ನೀಡಿದ್ದು, ಆದರೆ ಮಧ್ಯಂತರ ಜಾಮೀನು ಕೋರಿ ಆತ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ.