ಬೆಂಗಳೂರು: ನಾಳೆಯಿಂದ ರಾಜ್ಯಾದ್ಯಂತ ಮೂರನೇ ಹಂತದ ಲಾಕ್ ಡೌನ್ ಸಡಿಲಿಕೆ ಜಾರಿಗೆ ಬರಲಿದ್ದು, ಶೇ.95ರಷ್ಟು ಜನಜೀವನ ಅನ್ ಲಾಕ್ ಆಗಲಿದೆ. ಮೊದಲಿನಂತೆಯೇ ವಾಣಿಜ್ಯ ಚಟುವಟಿಕೆ, ಸಾರಿಗೆ ಸಂಚಾರಕ್ಕೆ ಕೂಡ ಬಹುತೇಕ ಅವಕಾಶ ನೀಡಲಾಗಿದೆ. ಹೀಗಾಗಿ ಬೆಂಗಳೂರಿನ ರಸ್ತೆಗಳಲ್ಲಿ ಬಿಎಂಟಿಸಿ ಮತ್ತೆ ಸಂಚಾರ ಆರಂಭಿಸಲಿದೆ.
ಇಷ್ಟು ದಿನದಂತೆ ಬಸ್ ಇಲ್ಲ ಎಂದು ಪ್ರಯಾಣಿಕರು ಗೊಣಗಿಗೊಳ್ಳಬೇಕಿಲ್ಲ. ಬೆಂಗಳೂರಿನ ರಸ್ತೆಗಳಲ್ಲಿ ನಾಳೆಯಿಂದ ಮೊದಲಿನಂತೆಯೇ ಬಿಎಂಟಿಸಿ ಬಸ್ ಸಂಚಾರ ಆರಂಭಿಸಲಿದ್ದು, 5000 ಬಸ್ ಗಳು ಸಂಚರಿಸಲಿವೆ.
ಜೂಜು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 218 ಮಂದಿ ಅರೆಸ್ಟ್
ಅನ್ ಲಾಕ್-3.0 ನಲ್ಲಿ ನಾಳೆಯಿಂದ ಹೆಚ್ಚುವರಿಯಾಗಿ 2000 ಬಿಎಂಟಿಸಿ ಬಸ್ ಗಳು ಸಂಚರಿಸಲಿವೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ.