ವಿಜಯಪುರ: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರರಿಗೆ ಕೇವಲ ಬಾಯಿ ಮಾತಲ್ಲಿ ಕಠಿಣ ಕ್ರಮ ಎಂದು ಹೇಳಿದರೆ ಸಾಲದು ಖಡಕ್ ಉತ್ತರ ನೀಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿಎಂ ಬೊಮ್ಮಾಯಿ, ಗೃಹ ಸಚಿವರಿಗೂ ಹೇಳಿದ್ದೇನೆ. ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಬೇಕು. ಒಂದಿಬ್ಬರನ್ನು ಎನ್ ಕೌಂಟರ್ ಮಾಡಿ ಬುದ್ಧಿ ಕಲಿಸಬೇಕು. ಆಗ ಉಗ್ರ ಕೃತ್ಯಗಳು ಕಡಿಮೆಯಾಗುತ್ತೆ. ಇಲ್ಲದಿದ್ದರೆ ಉಗ್ರರು ರಾಜಾರೋಷವಾಗಿ ದುಷ್ಕೃತ್ಯ ಮಾಡುತ್ತಿರುತ್ತಾರೆ ಎಂದು ಹೇಳಿದರು.
ಗೃಹ ಸಚಿವರು ಒಳ್ಳೆಯವರು, ಇದರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲಿ ಬರಿ ಒಳ್ಳೆತನವಿದ್ದರೆ ಸಾಲದು ಖಡಕ್ ಕ್ರಮ ಕೈಗೊಳ್ಳಬೇಕು. ಎಚ್ಚರಿಕೆ ಸಂದೇಶ ರವಾನೆಯಾಗಬೇಕು ಎಂದರೆ ಎನ್ ಕೌಂಟರ್ ಮಾಡಿ ಬುದ್ದಿ ಕಲಿಸಬೇಕು. ಉತ್ತರ ಪ್ರದೇಶ ಮಾದರಿಯಲ್ಲಿ ಇಲ್ಲಿ ಕ್ರಮವಾಗಬೇಕು ಎಂದರು.