ಬೆಂಗಳೂರು: ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳ ಅಪರಾಧ ಸಾಬೀತಾಗಿದ್ದು, ಜಿವಾವಧಿ ಶಿಕ್ಷೆ ವಿಧಿಸಿ 54ನೇ ಸಿಸಿಹೆಚ್ ಕೋರ್ಟ್ ತೀರ್ಪು ನೀಡಿದೆ.
ಮಹಿಳಾ ಅಪರಾಧಿ ತಾನಿಖಾ ಖಾನಂಗೆ 20 ವರ್ಷ ಶಿಕ್ಷೆ, ಅಪರಾಧಿ ಜಮಾಲ್ ಗೆ 5 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಬಾಂಗ್ಲಾದಿಂದ ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಈ ಪ್ರಕರಣದ ಎಲ್ಲರೂ ಬೆಂಗಳೂರಿನ ರಾಮಮೂರ್ತಿ ನಗರದ ಎನ್ ಆರ್ ಕಾಲೋನಿಯಲ್ಲಿ ವಾಸವಾಗಿದ್ದರು. ವೇಶ್ಯಾವಾಟಿಕೆ ಮೂಲಕ ಹಣ ಸಂಪಾದಿಸುತ್ತಿದ್ದರು. ಸ್ನೇಹಿತನ ಮಧ್ಯೆ ಆರಂಭವಾಗಿದ್ದ ಮನಸ್ತಾಪ ಜಗಳಕ್ಕೆ ತಿರುಗಿ ಬಳಿಕ ತಮ್ಮ ಜತೆಯೇ ಇದ್ದ ಯುವತಿಯ ಮೇಲೆ ಆರೋಪಿಗಳು ಗ್ಯಾಂಗ್ ರೇಪ್ ನಡೆಸಿದ್ದರು. ಕಳೆದ ವರ್ಷ ಮೇ 18ರಂದು ಈ ಘಟನೆ ನಡೆದಿದ್ದು, ಆರೋಪಿಗಳು ಕೃತ್ಯದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದರು.
ಪ್ರಕರಣ ಸಂಬಂಧ ಇದೀಗ ಬೆಂಗಳೂರಿನ 54ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶ ಎನ್ ಸುಬ್ರಮಣ್ಯ 7 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.