ಕೋವಿಡ್ ಸೋಂಕಿನ ವಿರುದ್ಧ ಮನುಕುಲದ ಹೋರಾಟದಲ್ಲಿ ಅಕ್ಕ ಪಕ್ಕದ ದೇಶಗಳ ನೆರವಿಗೆ ನಿಂತಿರುವ ಭಾರತ ಲಸಿಕೆಗಳನ್ನು ದಾಖಲೆ ಪ್ರಮಾಣದಲ್ಲಿ ಒದಗಿಸುತ್ತಾ ಬಂದಿದೆ.
ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಭಾರತ, ನೆರೆಯ ಬಾಂಗ್ಲಾದೇಶಕ್ಕೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ನೆರವಾಗಲು ಆಮ್ಲಜನಕ ಪೂರೈಕೆ ಮಾಡಲು ಮುಂದಾಗಿದೆ. ಈ ನಿಟ್ಟಿನ ಮೊದಲ ಹೆಜ್ಜೆಯಾಗಿ 200 ಮೆಟ್ರಿಕ್ ಟನ್ಗಳಷ್ಟು ವೈದ್ಯಕೀಯ ಆಮ್ಲಜನಕ ಹೊತ್ತ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಶನಿವಾರ ಬೆಳಿಗ್ಗೆ ಬಾಂಗ್ಲಾದೇಶಕ್ಕೆ ಹೊರಟಿದೆ.
“ವಸುದೈವ ಕುಟುಂಬಕಂ ಎಂಬ ನನ್ನ ಪಾರಂಪರಿಕ ಸ್ಪೂರ್ತಿಗೆ ತಕ್ಕಂತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ರೈಲ್ವೇ ಕೋವಿಡ್ ವಿರುದ್ಧ ಮನುಕುಲದ ಹೋರಾಟದಲ್ಲಿ ನೆರವಾಗಲು ನಿಂತಿದೆ” ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ ಆಕ್ಸಿಜನ್ ಎಕ್ಸ್ಪ್ರೆಸ್ ರೈಲಿನ ಪಯಣದ ವಿಡಿಯೋ ಸಹ ಲಗತ್ತಿಸಲಾಗಿದೆ.