ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಬೆಂಬಲ ಜೆಡಿಎಸ್ ಗಿದೆ. 2023ರ ಚುನಾವಣೆಯಲ್ಲಿ ಜೆಡಿಎಸ್ ಮೊದಲ ಸ್ಥಾನದಲ್ಲಿರಲಿದೆ. ಬಿಜೆಪಿ 2ನೇ ಹಾಗೂ ಕಾಂಗ್ರೆಸ್ 3ನೇ ಸ್ಥಾನಕ್ಕಿಳಿಯಲಿದೆ ಎಂದು ಎಂ.ಎಲ್.ಸಿ., ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಇಬ್ರಾಹಿಂ, ಯಾವುದೇ ಕಾರಣಕ್ಕೂ ಮತ್ತೆ ನಾನು ಕಾಂಗ್ರೆಸ್ ಗೆ ಹೋಗುವ ಮಾತೇ ಇಲ್ಲ. ಫೆ.14ರ ಸಭೆ ಬಳಿಕ ಜೆಡಿಎಸ್ ಸೇರ್ಪಡೆ ಬಗ್ಗೆ ನಿರ್ಧರಿಸುತ್ತೇನೆ. ಫೆ.14ರ ಬಳಿಕ ಯಾರೆಲ್ಲ ಕಾಂಗ್ರೆಸ್ ತೊರೆಯಲಿದ್ದಾರೆ ಎಂಬುದನ್ನು ನೀವೇ ನೋಡುತ್ತಿರಿ ಎಂದರು.
ಫೆ.11ರಂದು ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್’ ಟೀಸರ್ ರಿಲೀಸ್
2023 ಕ್ಕೆ ಜೆಡಿಎಸ್ ಮೊದಲ ಸ್ಥಾನದಲ್ಲಿರಲಿದೆ. ರಾಜ್ಯಾದ್ಯಂತ ಜೆಡಿಎಸ್ ಗೆ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ನಾಯಕರು ಜೆಡಿಎಸ್ ನತ್ತ ಮುಖ ಮಾಡುತ್ತಿದ್ದಾರೆ. ನೀರು ಸೋರುವ ಕಡೆ ಕುಮಾರಸ್ವಾಮಿ ಕೊಡ ಇಡ್ತಾರೆ. ಬಸಿದ ನೀರಲ್ಲೇ ಕುಮಾರಸ್ವಾಮಿ, ಗೌಡರ ಕೊಡ ತುಂಬ್ತಿದೆ ಎಂದು ಹೇಳಿದರು.
ಇದೇ ವೇಳೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ವಿವಾದ ಕುರಿತು ಪ್ರತಿಕ್ರಿಯಿಸಿದ ಸಿ.ಎಂ.ಇಬ್ರಾಹಿಂ, ವಿವಾದ ಮಾಡುವುದರಲ್ಲಿ ಸರ್ಕಾರ ಮುಂಚೂಣಿಯಲ್ಲಿದೆ. ಯಾವುದೇ ವಿವಾದ ಮಾಡಿದರೂ ಸಕ್ಸಸ್ ಆಗ್ತಿಲ್ಲ. ಗೋ ಹತ್ಯೆ, ಧರ್ಮ ಪರಿವರ್ತನಾ ಬಿಲ್ ಅಲ್ಲೇ ನಿಂತಿದೆ. ಈಗ ಇದ್ದಕ್ಕಿದ್ದಂತೆ ಹಿಜಾಬ್ ವಿವಾದ ಆರಂಭವಾಗಿದೆ ಎಂದು ಕಿಡಿಕಾರಿದರು.