
ಹುಬ್ಬಳ್ಳಿ: ಬಜರಂಗದಳ ಬ್ಯಾನ್ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿರುವ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತೆ ಕಿಡಿಕಾರಿದ್ದು, ಬಜರಂಗದಳ ನಿಷೇಧ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಎಲ್ಲಿಯವರೆಗೆ ಕಾಂಗ್ರೆಸ್ ಪಿ ಎಫ್ ಐ, ಎಸ್ ಡಿ ಪಿ ಐ ಗಳನ್ನು ಸಂತೋಷ ಪಡಿಸುತ್ತಿರುತ್ತೋ ಅಲ್ಲಿಯವರೆಗೂ ಬಜರಂಗದಳ ವಿಚಾರ ಜನರ ಮಧ್ಯೆ ಇದ್ದೇ ಇರುತ್ತದೆ ಎಂದು ಟಾಂಗ್ ನೀಡಿದರು.
ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆಗೆ ಬಿಜೆಪಿ ಹೆದರಿದೆ ಎಂಬ ಕಾಂಗ್ರೆಸ್ ಟೀಕೆ ಹಾಸ್ಯಾಸ್ಪದವಾದದ್ದು ಎಂದು ಹೇಳಿದರು.