alex Certify BIG NEWS: ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ; 7 ಆರೋಪಿಗಳು ಅರೆಸ್ಟ್; 12 ಜನರು ವಶಕ್ಕೆ; ಸ್ಪಷ್ಟನೆ ನೀಡಿದ ADGP | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ; 7 ಆರೋಪಿಗಳು ಅರೆಸ್ಟ್; 12 ಜನರು ವಶಕ್ಕೆ; ಸ್ಪಷ್ಟನೆ ನೀಡಿದ ADGP

ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದ್ದು, 12 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಡಿಜಿಪಿ ಮುರುಗನ್ ತಿಳಿಸಿದ್ದಾರೆ.

ಅಫಾನ್, ಚಿಕು, ಖಾಸಿಫ್ ಅಲಿಯಾಸ್ ಖಾಸಿ, ಸಲ್ಮಾನ್ ಸೇರಿದಂತೆ 7 ಆರೋಪಿಗಳು ಬಂಧಿತರಾಗಿದ್ದು, 12 ಆರೋಪಿಗಳ ವಿಚಾರಣೆ ನಡೆದಿದೆ. ತನಿಖೆ ಚುರುಕುಗೊಳಿಸಲಾಗಿದ್ದು, ಹತ್ಯೆ ಪ್ರಕರಣದ ಬಗ್ಗೆ ತನಿಖೆ ಬಳಿಕ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು.

ಶಿವಮೊಗ್ಗದಲ್ಲಿ ನಡೆದ ಘಟನೆ ಬಗ್ಗೆ ಈವರೆಗೆ 8 ಎಫ್ಐಆರ್ ದಾಖಲಾಗಿದೆ. 144 ಸೆಕ್ಷನ್ ಹಾಗೂ ಕರ್ಫ್ಯೂ ಮುಂದುವರೆಸಲಾಗಿದೆ. ಶಾಲಾ-ಕಾಲೇಜುಗಳಿಗೂ ಇಂದು ಕೂಡ ರಜೆ ನೀಡಲಾಗಿದೆ ಎಂದರು.

ಸಧ್ಯ ಶಿವಮೊಗ್ಗ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಆತಂಕಕಾರಿ ವಾತಾವರಣವಿಲ್ಲ. ಜನರು ಎಂದಿನಂತೆ ಸಹಜವಾಗಿ ತಮ್ಮ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...