ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿರುವ ಅತಿವೃಷ್ಠಿಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ, ರೈತರ ಬೆಳೆ, ಜಮೀನು ನೀರುಪಾಲಾಗಿದೆ. ಆದರೆ ಮಳೆಹಾನಿ ಪರಿಶೀಲನೆಗೆ ಬಂದ ಕೇಂದ್ರ ತಂಡ ಕಾಟಾಚಾರಕ್ಕೆ ಪರಿಶೀಲನೆ ನಡೆಸಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ನಿಯಮ 69 ಅಡಿ ರಾಜ್ಯದಲ್ಲಿನ ಅತಿವೃಷ್ಠಿ ಕುರಿತು ವಿಷಯ ಮಂಡಿಸಿದ ಕುಮಾರಸ್ವಾಮಿ, ಕೇಂದ್ರ ತಂಡ ಬೆಳೆಹಾನಿ ಪರಿಶೀಲನೆಗೆ ಬಂದಿತ್ತು. ಆದರೆ ರೈತರ ಹೊಲಗಳಿಗೂ ಭೇಟಿ ನೀಡದೇ ಕಾಟಾಚಾರದ ಪರಿಶೀಲನೆ ಮಾಡಿದೆ ಎಂದು ಕಿಡಿ ಕಾರಿದರು.
ಶಿಗ್ಗಾಂವಿ ತಾಲೂಕಿನಲ್ಲಿ ಬೆಳೆ ಹಾನಿ ಪರಿಶೀಲನೆಗೆ ಎಂದು ಹೋದ ಅಧಿಕಾರಿಗಳು ಅಲ್ಲಿನ ಹೊಲಗಳಿಗೂ ಇಳಿಯದೇ ರಸ್ತೆ ಮೇಲೇಯೇ ನಿಂತು ಪರಿಶೀಲಿಸಿದ್ದಾರೆ. ಬಂದ ಪುಟ್ಟ, ಹೋದ ಪುಟ್ಟ ಎಂಬಂತೆ ಕೇಂದ್ರ ಅಧಿಕಾರಿಗಳ ತಂಡ ನಡೆದುಕೊಂಡಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲು ಪರಿಹಾರ ಕೊಡಿಸಿ, ಇಲ್ಲವಾದರೆ ವಿಷ ಸೇವಿಸುವ ಪರಿಸ್ಥಿತಿ ಇದೆ ಎಂದು ಹಾವೇರಿ ಜನರು ಮನವಿ ಮಾಡಿದ್ದಾರೆ ಆಗ್ರಹಿಸಿದರು.