ರಾಮನಗರ: ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ನೀಲಾಂಬಿಕೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಮೊಬೈಲ್ ಪೊಲೀಸರಿಗೆ ಲಭ್ಯವಾಗಿದೆ. ಇದರೊಂದಿಗೆ ಇನ್ನಷ್ಟು ಸ್ವಾಮೀಜಿಗಳು ನೀಲಾಂಬಿಕೆ ಖೆಡ್ಡಾಗೆ ಬಿದ್ದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ನೀಲಾಂಬಿಕೆ ಬಂಡೆಮಠದ ಬಸವಲಿಂಗ ಶ್ರೀ ಅವರ ವಿಡಿಯೋ ರೆಕಾರ್ಡ್ ಮಾಡಿದ್ದ ಫೋನ್ ಪೊಲೀಸರಿಗೆ ಲಭ್ಯವಾಗಿದ್ದು, ಈ ಫೋನನ್ನು ಹಲವು ಬಾರಿ ನೀಲಾಂಬಿಕೆ ಫ್ಲ್ಯಾಶ್ ಮಾಡಿದ್ದರಿಂದ ಅದರಲ್ಲಿರುವ ಹಲವು ಮಾಹಿತಿಗಳು ಸಂಪೂರ್ಣ ಡಿಲಿಟ್ ಆಗಿದೆ. ತಾನು ಪೊಲೀಸರ ಕೈಗೆ ಸಿಕ್ಕಿ ಬೀಳಬಾರದು ಎಂಬ ಕಾರಣಕ್ಕೆ ನೀಲಂಬಿಕೆ ಮೊಬೈಲ್ ನ್ನು ಫ್ಲ್ಯಾಶ್ ಮಾಡಿದ್ದಳು. ಈ ಬಗ್ಗೆ ವಿಚಾರಣೆ ವೇಳೆ ನೀಲಾಂಬಿಕೆ ಬಾಯಿಬಿಟ್ಟಿದ್ದಾಳೆ.
ಅಲ್ಲದೇ ಬಂಡೆಶ್ರೀಗಳ ಮೂರು ವಿಡಿಯೋಗಳನ್ನು ರೆಕಾರ್ಡ್ ಮಾಡಿ ಕಣ್ಣೂರು ಶ್ರೀಗಳಿಗೆ ತೋರಿಸಿ ಮಹದೇವಯ್ಯನಿಗೆ ಕಳುಹಿಸಿದ್ದಾಗಿ ಹೇಳಿದ್ದಾಳೆ. ಬಳಿಕ ಮೊಬೈಲ್ ಫ್ಲ್ಯಾಶ್ ಮಾಡಿ ಹೊಸ ಮೊಬೈಲ್ ಖರೀದಿಸಿದ್ದಳಂತೆ.
ಬಂಡೆಮಠದ ಶ್ರೀಗಳ ಜೊತೆ ಎರಡು ವರ್ಷಗಳಿಂದ ನೀಲಾಂಬಿಕೆ ಸಂಪರ್ಕದಲ್ಲಿದ್ದಳಂತೆ. ಇನ್ನು ನೀಲಾಂಬಿಕೆ ಹೆಣೆದಿದ್ದ ಬಲೆಗೆ ಇತರ ಸ್ವಾಮೀಜಿಗಳು ಬಿದ್ದಿರುವ ಸಂಗತಿ ಬಯಲಾಗಿದೆ. ಹಲವು ಸ್ವಾಮೀಜಿಗಳ ಜೊತೆ ನೀಲಾಂಬಿಕೆ ನಿರಂತರವಾಗಿ ವಿಡಿಯೋ ಕಾಲ್ ನಲ್ಲಿ ಇದ್ದಳು. ಹೀಗೆ ಮಾತನಾಡುವಾಗ ಮುಖ ಬಾರದಂತೆ ಕವರ್ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಒಟ್ಟಾರೆ ನೀಲಾಂಬಿಕೆ ಖೆಡ್ಡಾಗೆ ಇನ್ನಷ್ಟು ಸ್ವಾಮೀಜಿಗಳು ಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.