ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಭೀತಿಯ ಹಿನ್ನೆಲೆಯಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಉದ್ಯೋಗಗಳನ್ನು ಕಡಿತ ಮಾಡುತ್ತಿದ್ದು, ಈಗಾಗಲೇ ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ಪ್ರಕ್ರಿಯೆ ಈಗಲೂ ಮುಂದುವರೆದಿದ್ದು ಫೇಸ್ಬುಕ್ ಒಡೆತನದ ಮೆಟಾ ಸಂಸ್ಥೆ ಮತ್ತೆ 10,000 ಉದ್ಯೋಗಗಳ ಕಡಿತಕ್ಕೆ ಮುಂದಾಗಿದೆ.
ಉದ್ಯೋಗ ಕಡಿತ ಕುರಿತಂತೆ ಅಮೆರಿಕ ಮೂಲದ ಮೆಟಾ ಮಾಹಿತಿ ನೀಡಿದ್ದು, 10 ಸಾವಿರ ಉದ್ಯೋಗ ಕಡಿತ ಮಾಡುವುದಲ್ಲದೆ ಖಾಲಿ ಉಳಿದಿರುವ ಇನ್ನೂ 5 ಸಾವಿರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ ಒಟ್ಟು 15,000 ಹುದ್ದೆಗಳಿಂದ ಅವಕಾಶ ವಂಚಿತರಾಗಲಿದ್ದಾರೆ.
ಕಳೆದ ವರ್ಷದ ನವೆಂಬರ್ ನಲ್ಲಿ 11,000 ಉದ್ಯೋಗಿಗಳನ್ನು ‘ಮೆಟಾ’ ಸಂಸ್ಥೆ ಕೆಲಸದಿಂದ ತೆಗೆದು ಹಾಕಿದ್ದು, ಇನ್ನೂ ಎರಡು ತಿಂಗಳುಗಳ ಕಾಲ ಈ ಪ್ರಕ್ರಿಯೆ ನಡೆಯಲಿದೆ ಎಂದು ಹೇಳುವ ಮೂಲಕ ಮೆಟಾ ಸಿಇಓ ಮಾರ್ಕ್ ಝುಕರ್ ಬರ್ಗ್ ಉದ್ಯೋಗಿಗಳ ಎದೆ ಬಡಿತವನ್ನು ಹೆಚ್ಚಿಸಿದ್ದಾರೆ.