ಬೆಂಗಳೂರು: ನಟ ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾ ವಿವಾದ ಇದೀಗ ಫಿಲ್ಮ್ ಚೇಂಬರ್ ಮೆಟ್ಟಿಲೇರಿದೆ. ಹೆಡ್ ಬುಷ್ ಸಿನಿಮಾದಲ್ಲಿ ಕರಗ ಉತ್ಸವದ ಬಗ್ಗೆ ಅವಹೇಳನ ಆರೋಪ ಕೇಳಿಬಂದಿದ್ದು, ಮಧ್ಯಾಹ್ನ ಫಿಲ್ಮ್ ಚೇಂಬರ್ ನಲ್ಲಿ ಸಭೆ ನಡೆಯಲಿದೆ.
ಮಧ್ಯಾಹ್ನ 3 ಗಂಟೆಗೆ ಚಲನಚಿತ್ರ ವಣಿಜ್ಯ ಮಂಡಳಿಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾಮಾ.ಹರೀಶ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ನಟ ಧನಂಜಯ್, ಅಗ್ನಿ ಶ್ರೀಧರ್, ಕರಗ ಸಮಿತಿ ಸದಸ್ಯರು ಭಾಗಿಯಾಗಲಿದ್ದಾರೆ.
ಹೆಡ್ ಬುಷ್ ಚಿತ್ರದಲ್ಲಿನ ವಿವಾದ ಬಗೆ ಹರಿಸುವ ನಿಟ್ಟಿನಲ್ಲಿ ಹಾಗೂ ವಿವಾದಿತ ದೃಶ್ಯಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿಯೂ ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ.