ತುಂಬಾ ಹಸಿವಾದಾಗ ಹೊಟ್ಟೆ ತುಂಬಾ ತಿನ್ನುತ್ತೇವೆ. ಆದರೆ ಕೆಲವರಿಗೆ ಇದರಿಂದ ಹೊಟ್ಟೆ ಭಾರ ಎನಿಸುತ್ತದೆ. ಇದರಿಂದ ಕುಳಿತುಕೊಳ್ಳಲು, ನಿಂತುಕೊಳ್ಳಲು ಕಷ್ಟವಾಗುತ್ತದೆ. ಅಂತವರು ಊಟವಾದ ತಕ್ಷಣ ಇದನ್ನು ಸೇವಿಸಿ.
ಊಟವಾದ ಮೇಲೆ ಹೊಟ್ಟೆ ಭಾರ ಎನಿಸಿದರೆ 2 ಚಮಚ ಜೇನುತುಪ್ಪ ಸೇವಿಸಿ. ದಿನಕ್ಕೆ 2 ಬಾರಿ ಸೇವಿಸಿ. ಇದರಿಂದ ತಿಂದ ಆಹಾರ ಬೇಗ ಜೀರ್ಣವಾಗಿ ಹೊಟ್ಟೆ ಭಾರ ಕಡಿಮೆಯಾಗುತ್ತದೆ. ಆದರೆ ಮಧುಮೇಹದವರು ಜೇನುತುಪ್ಪದ ಬದಲು ಏಲಕ್ಕಿ ಸೇವಿಸಿ.
ಅಗಸೆ ಬೀಜವನ್ನು ನೆನೆಸಿ ರಾತ್ರಿ ಮಲಗುವ ವೇಳೆ ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ಊಟ ಮಾಡಿದ ಬಳಿಕ ಉಂಟಾಗುವ ಹೊಟ್ಟೆ ಭಾರದ ಸಮಸ್ಯೆಯನ್ನು ನಿವಾರಿಸುತ್ತದೆ.