ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಹಂತಕರ ಕುರಿತು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪೂರ್ವನಿಯೋಜಿತ ಕೃತ್ಯವಾಗಿದ್ದು, ಹಂತಕರು ಪ್ರವೀಣ್ ಅಂಗಡಿಯ ಸಮೀಪವೇ ಬಾಡಿಗೆ ಮನೆ ಪಡೆದು ವಾಸವಾಗಿದ್ದರು ಎನ್ನಲಾಗಿದೆ.
ಪ್ರವೀಣ್ ನೆಟ್ಟಾರು ಅಂಗಡಿಯ 500 ಮೀಟರ್ ದೂರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದ ಹಂತಕರು ಹತ್ಯೆಗೆ ಮೊದಲೇ ಸಂಚು ರೂಪಿಸಿದ್ದರು. ಅಲ್ಲದೇ ಸ್ಟ್ರೀಟ್ ಲೈಟ್ ಆಫ್ ಮಾಡಿ ಬಳಿಕ ಕೊಲೆ ನಡೆಸಿದ್ದರು. ಪ್ರಕರಣದಲ್ಲಿ ಬಂಧಿಸಲ್ಪಟ್ಟ ಶಫೀಕ್ ಹಾಗೂ ಜಾಕಿರ್ ಪಾತ್ರ ಪ್ರಮುಖವಾಗಿದ್ದು, ಪ್ರವೀಣ್ ಅಂಗಡಿಯಿಂದ 500 ಮೀಟರ್ ದೂರದಲ್ಲಿ ಹಾಗೂ ಬೆಳ್ಳಾರೆ ಠಾಣೆಯಿಂದ ಅನತಿ ದೂರದಲ್ಲಿಯೇ ಆರೋಪಿ ಶಫೀಕ್ ಬಾಡಿಗೆ ಮನೆ ಪಡೆದು ತಂದೆ-ತಾಯಿ ಜತೆ ವಾಸವಾಗಿದ್ದ. ಇದೇ ಮನೆಯಲ್ಲಿ ಕುಳಿತು ಹಂತಕರು ಕೊಲೆ ಸಂಚು ರೂಪಿಸಿದ್ದರು ಎಂಬ ಮಾಹಿತಿ ತನಿಖೆ ವೇಳೆ ತಿಳಿದು ಬಂದಿದೆ ಎನ್ನಲಾಗಿದೆ.