
ನಾಯಕರುಗಳಾದ ನೀವುಗಳು ಆರಾಮವಾಗಿ ಇರ್ತೀರಾ. ನಿಮ್ಮ ಗೆಲುವಿಗಾಗಿ ದುಡಿಯುವ ನಾವು ಬೀದಿಯಲ್ಲಿ ಸಾಯಬೇಕಾ ಎಂದು ಪ್ರಶ್ನಿಸಿರುವ ಕಾರ್ಯಕರ್ತರುಗಳು, ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ಹೇಳಿದ್ದಾರೆ.
ಪ್ರತಿ ಬಾರಿ ಹಿಂದೂ ಕಾರ್ಯಕರ್ತರುಗಳ ಹತ್ಯೆಯಾದಾಗ ಕಠಿಣ ಕ್ರಮ ಎಂಬ ನಾಟಕ ಮಾಡುತ್ತೀರಿ. ಪ್ರವೀಣ್ ಪತ್ನಿಗೆ ಟಿಕೆಟ್ ಕೊಟ್ಟರೆ ಚುನಾವಣೆಯ ಎಲ್ಲ ಖರ್ಚು ವೆಚ್ಚ ನೋಡಿಕೊಂಡು ಅವರನ್ನು ಗೆಲ್ಲಿಸುವ ಮೂಲಕ ಜಿಹಾದಿಗಳಿಗೆ ಪಾಠ ಕಲಿಸುತ್ತೇವೆ ಎಂದು ತಿಳಿಸಿದ್ದಾರೆ.