ಚಿಕ್ಕಮಗಳೂರು: ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಎಲ್ಲಿ ನೋಡಿದರಲ್ಲಿ ಭೂಕುಸಿತ, ಗುಡ್ಡಕುಸಿತ, ರಸ್ತೆಗಳು, ಕೃಷಿ ಭೂಮಿ ಜಲಾವೃತ ದೃಶ್ಯಗಳೇ ಕಂಡುಬರುತ್ತಿವೆ. ಮಳೆ ಹಾನಿ ಪ್ರದೇಶ ಪರಿಶೀಲನೆಗಾಗಿ ತೆರಳಿದ್ದ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೆಸರಿನಲ್ಲಿ ಸಿಲುಕಿ ಪರದಾಡಿದ ಪ್ರಸಂಗ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಅರೆನೂರಿನಲ್ಲಿ ಗುಡ್ಡ ಕುಸಿತವುಂಟಾಗಿ ಕಾಫಿ ತೋಟಗಳು ಮಣ್ಣು ಪಾಲಾಗಿದ್ದು, ಪರಿಶೀಲನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಭೇಟಿ ನೀಡಿದ್ದರು. ಈ ವೇಳೆ ಸಚಿವರ ಕಾಲು ಕಾಫಿ ತೋಟದ ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಕೆಸರಿನಿಂದ ಕಾಲು ಹೊರತೆಗೆಯಲಾಗದೇ ಸಚಿವರು ಪರದಾಡಿದ್ದಾರೆ.
ತಕ್ಷಣ ಸ್ಥಳೀಯರು ಸಚಿವರಿಗೆ ಸಹಾಯ ಮಾಡಿದ್ದು, ಕೆಸರಿನಲ್ಲಿ ಸಿಲುಕಿದ್ದ ಸಚಿವರ ಕಾಲನ್ನು ಹೊರತೆಗೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.