ಬೆಂಗಳೂರು: ಪ್ರಧಾನಿ ಮೋದಿ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್, ಪ್ರಧಾನಿ ಮೋದಿ ‘ಮೌನೇಂದ್ರ ಮೋದಿ’ ಎಂದು ಹೆಸರು ಬದಲಿಸಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದೆ.
ಮಕ್ಕಳಿಗಾಗಿ ವಿಮೆ ಪಾಲಿಸಿ ತೆಗೆದುಕೊಳ್ಳುವ ಮುನ್ನ ಇದು ತಿಳಿದಿರಲಿ
ವಾಸ್ತವದ ಬಗ್ಗೆ ಮಾತನಾಡದ ಪ್ರಧಾನಿ ಮೋದಿ ಹೆಸರು ಬದಲಿಸಿಕೊಳ್ಳುವುದು ಉತ್ತಮ ಎಂದು ಸರಣಿ ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ. ಬೆಲೆ ಏರಿಕೆ ಬಗ್ಗೆ-ಮೌನ, ಕಾಶ್ಮೀರದ ದಳ್ಳುರಿ ಬಗ್ಗೆ ಕೇಳಿದರೆ-ಮೌನ, ಚೀನಾ ಅತಿಕ್ರಮಣಕ್ಕೆ-ಮೌನ, ರೈತರ ಹತ್ಯೆಗೆ – ಮೌನ, ಅದಾನಿ ಡ್ರಗ್ಸ್ ದಂಧೆಯ ಬಗ್ಗೆ -ಮೌನ, ನಿರುದ್ಯೋಗದ ಬಗ್ಗೆ ಮೌನ, ಪತ್ರಿಕಾಗೋಷ್ಠಿಗೆ ಮೌನ ಹೀಗಾಗಿ ನರೇಂದ್ರ ಮೋದಿ ಮೌನೇಂದ್ರ ಮೋದಿ ಎಂದು ಹೆಸರು ಬದಲಿಸಿಕೊಳ್ಳಲಿ ಎಂದು ಗುಡುಗಿದೆ.
ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ ನರೇಂದ್ರ ಮೋದಿ ಓದಿಲ್ಲ, ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು, ಆದರೂ ಓದಿಲ್ಲ, ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ. ಹೆಬ್ಬಟ್ಟು ಗಿರಾಕಿ ಮೋದಿಯಿಂದ ದೇಶದ ಜನ ನರಳುತ್ತಿದ್ದಾರೆ ಎಂದು ಹಿಗ್ಗಾ ಮುಗ್ಗಾ ಕಿಡಿಕಾರಿದೆ.
https://twitter.com/INCKarnataka/status/1449974792799461385?ref_src=twsrc%5Egoogle%7Ctwcamp%5Eserp%7Ctwgr%5Etweet
https://twitter.com/INCKarnataka/status/1449986618182410245?ref_src=twsrc%5Egoogle%7Ctwcamp%5Eserp%7Ctwgr%5Etweet