ಬೆಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿಲಿದ್ದಾರೆ ಎಂದು ಮೋದಿ ಪ್ರಯಾಣಿಸುವ ಮಾರ್ಗದ ಕಾಲೇಜುಗಳಿಗೆ ರಜೆ ನೀಡಿದ್ದು ಯಾಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರಧಾನಿ ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿ ಕಾಲೇಜಿಗೆ ರಜೆ ನೀಡಲಾಗಿದೆ. ಕಾಲೇಜುಗಳಿಗೆ ಯಾಕೆ ರಜೆ ಕೊಟ್ಟಿದ್ದಾರೆ? ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ? ಅವರನ್ನು ಅನುಮಾನದಿಂದ ನೋಡುತ್ತಿರುವುದಾದರೂ ಯಾಕೆ? ವಿದ್ಯಾರ್ಥಿಗಳು ಭಯೋತ್ಪಾದಕರಾ? ಎಂದು ಕಿಡಿ ಕಾರಿದ್ದಾರೆ.
ಮಹಿಳೆಯರೇ…..ಈ ವಿಷಯದ ಕುರಿತು ವಹಿಸಿ ಎಚ್ಚರ…..!
ಪ್ರಧಾನಿಯವರಿಗೆ ಏನು ಭದ್ರತೆ ಕೊಡಬೇಕು ಕೊಡಿ. ಹಾಗಂತ ಅವರು ಹೋಗುವ ರಸ್ತೆಯಲ್ಲಿರುವ ಕಾಲೇಜುಗಳಿಗೆ ರಜೆ ಕೊಡುವುದು ಸರಿಯಲ್ಲ. ವಿದ್ಯಾರ್ಥಿಗಳನ್ನು ಅನುಮಾನದಿಂದ ಕಂಡು ಅವಮಾನಿಸುವುದು ಯಾಕೆ? ರೋಡಲ್ಲಿ ಏನು ಭದ್ರತೆ ಕೊಡಬೇಕು ಸರ್ಕಾರ ಕೊಡಲಿ. ರೋಡ್ ಶೋ ಮಾಡಿ ರಾಜಕೀಯ ಮಾಡಿ ಅದನ್ನು ಬಿಟ್ಟು ಹೀಗೆ ಮಾಡುತ್ತಿರುವುದು ಯಾಕೆ? ಎಂದು ಪ್ರಶಿಸಿದ್ದಾರೆ.
ಅಗ್ನಿಪಥ್ ಯೋಜನೆ ಜಾರಿಗೆ ತರಲಾಗಿದೆ. ನೇಮಕಾತಿ ವಯೋಮಿತಿ 17 ವರ್ಷಕಿಟ್ಟಿದ್ದು ಯಾಕೆ? ಆ ಮಕ್ಕಳು ಡಿಗ್ರಿ ಪಾಸ್ ಮಾಡಬಾರದಾ? ಮಂತ್ರಿಗಳ ಮಕ್ಕಳು ಇಂಜಿನಿಯರ್ ಆಗಬೇಕು, ಡಾಕ್ಟರ್ ಆಗಬೇಕು. ಆದರೆ ಬಡವರ ಮಕ್ಕಳು ಸೆಕ್ಯೂರಿಟಿ ಗಾರ್ಡ್ ಗಳಾಗಬೇಕಾ? ಎಂದು ವಾಗ್ದಾಳಿ ನಡೆಸಿದ್ದಾರೆ.