‘ಆಧಾರ್’ ಇಂದು ಅತ್ಯಗತ್ಯವಾದ ದಾಖಲೆಯಾಗಿದೆ. ಸರ್ಕಾರಿ ಹಾಗೂ ಸರ್ಕಾರೇತರ ಸೌಲಭ್ಯ ಸೇರಿದಂತೆ ಬ್ಯಾಂಕ್ ಖಾತೆ ತೆರೆಯಲೂ ಸಹ ಆಧಾರ್ ಕಡ್ಡಾಯವಾಗಿದೆ. ಆದರೆ ಇದರ ನವೀಕರಣ ಕುರಿತಂತೆ ಇದೀಗ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ಮಹತ್ವದ ಸೂಚನೆಯೊಂದನ್ನು ನೀಡಿದೆ.
ಪ್ರತಿ 10 ವರ್ಷಕ್ಕೊಮ್ಮೆ ಜನರು ಆಧಾರ್ ಬಯೋಮೆಟ್ರಿಕ್ ನವೀಕರಿಸಬೇಕು ಎಂದು ತಿಳಿಸಲಾಗಿದ್ದು, ಹೀಗಾಗಿ ಬಯೋಮೆಟ್ರಿಕ್ ಸೇರಿದಂತೆ ಇತರೆ ವಿವರಗಳನ್ನು ಸಹ ಅಪ್ಡೇಟ್ ಮಾಡಬೇಕಾಗಿದೆ.
ಈ ಮೊದಲು 5 ಮತ್ತು 15 ವರ್ಷ ವಯಸ್ಸಿನ ನಂತರದ ಮಕ್ಕಳು ಆಧಾರ್ ಗೆ ತಮ್ಮ ಬಯೋಮೆಟ್ರಿಕ್ ನವೀಕರಿಸಬೇಕಾಗಿತ್ತು. ಆದರೆ ಈಗ ಎಲ್ಲ ಜನರು ಸಹ ಪ್ರತಿ 10 ವರ್ಷಕ್ಕೊಮ್ಮೆ ಬಯೋಮೆಟ್ರಿಕ್ ನವೀಕರಿಸಬೇಕಾಗಿದ್ದು, ಆದರೆ 70 ವರ್ಷ ದಾಟಿದ ನಂತರ ನವೀಕರಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ.